ದಸರಾ ದೀಪಾಲಂಕಾರ ಅ.23ರವರೆಗೆ ವಿಸ್ತರಣೆ : ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

mysore
Published on

ಮೈಸೂರು: ದಸರಾ ದೀಪಾಲಂಕಾರವನ್ನು ಮತ್ತಷ್ಟು ಜನರು ಕಣ್ತುಂಬಿಕೊಳ್ಳಲಿ ಎಂಬ ಕಾರಣಕ್ಕೆ ಅ.23ರವರೆಗೆ ವಿಸ್ತರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಅ.23ರವರೆಗೆ ನಗರದ ಅರಮನೆ ಸುತ್ತಮುತ್ತಲಿನ ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಜತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಆಗಮನ ಹಾಗೂ ನಿರ್ಗಮನ, ನಿಲುಗಡೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?: ರಮಾವಿಲಾಸ ರಸ್ತೆಯಲ್ಲಿ ಮೂಡಾ ಜಂಕ್ಷನ್ ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ ಹಾಗೂ ಗಾಂಧಿ ಚೌಕದ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಬಿ.ಎನ್.ರಸ್ತೆ, ಎ.ವಿ.ರಸ್ತೆ, ಸಯ್ಯಜಿರಾವ್ ರಸ್ತೆ, ಪುರಂದರ ರಸ್ತೆ, ಸಯ್ಯಜಿರಾವ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಅಗ್ರಹಾರ ವೃತ್ತದವರೆಗೆ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಎಂ.ಜಿ ರಸ್ತೆ ಅಂಡರ್‌ಬ್ರಿಡ್ಜ್ ವರೆಗೆ, ಚಾಮರಾಜ ಜೋಡಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಓಲ್ಡ್ ಬ್ಯಾಂಕ್ ರಸ್ತೆಯಲ್ಲಿ ಗಾಂಧಿ ಚೌಕದಿಂದ ಸಯ್ಯಜಿರಾವ್ ರಸ್ತೆ ಜಂಕ್ಷನ್‌ವರೆಗೆ, ಅಶೋಕ ರಸ್ತೆಯಲ್ಲಿ ಮಿಲಾದ್ ಪಾರ್ಕ್ ಜಂಕ್ಷನ್‌ನಿಂದ ಹರ್ಷ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಚಂದ್ರಗುಪ್ತ ರಸ್ತೆಯಲ್ಲಿ ಅಶೋಕ ರಸ್ತೆ ಜಂಕ್ಷನ್‌ನಿಂದ ಬಿ.ಎನ್ ರಸ್ತೆ ಜಂಕ್ಷನ್‌ವರೆಗೆ, ಬಿ.ಎನ್ ರಸ್ತೆಯಲ್ಲಿ ಸೆಂಟ್ರಲ್ ಮಾಲ್ (ಛತ್ರಿ ಮರ) ಜಂಕ್ಷನ್‌ನಿಂದ ಹೈದರಾಲಿ ಖಾನ್ ವೃತ್ತದವರೆಗೆ (ಫೈವ್‌ಲೈಟ್ ಸರ್ಕಲ್), ನೆಹರು ವೃತ್ತದಿಂದ ನೇಮಿನಾಥ ಸ್ಟೀಲ್ ಜಂಕ್ಷನ್‌ವರೆಗೆ (ಮಿನಿ ವಿಧಾನಸೌಧ ರಸ್ತೆ ), ಟಿ.ಎನ್.ನರಸಿಂಹಮೂರ್ತಿ ವೃತ್ತದಿಂದ (ಎಲ್.ಐ.ಸಿ ವೃತ್ತ) ಹೈವೇ ವೃತ್ತದವರೆಗೆ ನೆಲ್ಸ್‌ನ್ ಮಂಡೇಲಾ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಹೈವೇ ವೃತ್ತದಿಂದ ಆರ್.ಎಂ.ಸಿ ವೃತ್ತದವರೆಗಿನ ಎಸ್.ಆರ್.ರಸ್ತೆ, ಆರ್.ಎಂ.ಸಿ ವೃತ್ತದಿಂದ ಜೆ.ಕೆ.ಮೈದಾನ ಜಂಕ್ಷನ್‌ವರೆಗಿನ ಶೇಷಾದ್ರಿ ಅಯ್ಯರ್ ರಸ್ತೆ, ಲೋಕರಂಜನ್ ರಸ್ತೆಯಲ್ಲಿ ಸರ್ಕಸ್ ಗ್ರೌಂಡ್ ಜಂಕ್ಷನ್‌ನಿಂದ ಹಾರ್ಡಿಂಜ್ ವೃತ್ತದವರೆಗೆ, ಮೃಗಾಲಯ ರಸ್ತೆಯಲ್ಲಿ ಸೋಮಸುಂದರಂ ವೃತ್ತದಿಂದ ಚೆನ್ನಯ್ಯ ವೃತ್ತದವರೆಗೆ, ಹರಿಕೃಷ್ಣ ವೃತ್ತದಿಂದ (ಡಿಪಿಒ) ಹಳೆ ಬಿಜೆಪಿ ಕಚೇರಿ ಜಂಕ್ಷನ್‌ವರೆಗೆ, ಚಾಮುಂಡಿ ವಿಹಾರ ಕ್ರೀಡಾಂಗಣ ರಸ್ತೆ, ವಸ್ತು ಪ್ರದರ್ಶನ ಮೈದಾನದ (ಉತ್ತರ ದ್ವಾರ) ಬಿ.ಎನ್ ರಸ್ತೆ ಜಂಕ್ಷನ್‌ನಿಂದ ಮೃಗಾಲಯ ರಸ್ತೆ ಜಂಕ್ಷನ್ ವರೆಗೆ (ಉಡುಪಿ ಹೋಟೆಲ್), ಮೃಗಾಲಯ ರಸ್ತೆಯಲ್ಲಿ ಎಸ್‌ಆರ್‌ಟಿ ಜಂಕ್ಷನ್‌ನಿಂದ ಹಳೆ ಪೋಸ್ಟ್ ಆಫೀಸ್ ಜಂಕ್ಷನ್‌ವರೆಗೆ, ಮಾನಸರ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿಂದ (ಮಾಲ್ ಆಫ್ ಮೈಸೂರು) ಲೋಕರಂಜನ್ ರಸ್ತೆ ಜಂಕ್ಷನ್ ವರೆಗೆ, ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿ ಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net