ಅ.6ರಿಂದ ಕಲ್ಕೂರ ಪ್ರತಿಷ್ಠಾನದಿಂದ ದಸರಾ ಗೊಂಬೆ ಪ್ರದರ್ಶನ

Dasara-Gombehabba-1
Published on


ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ದಸರಾ ಗೊಂಬೆ ಪ್ರದರ್ಶನ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನ ಅ.6ರಿಂದ 12ರವರೆಗೆ ಕದ್ರಿ ಕಂಬಳದ ಮಂಜು ಪ್ರಾಸಾದದಲ್ಲಿ ನಡೆಯಲಿದೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅ.6ರಂದು ಮಧ್ಯಾಹ್ನ 2:15ಕ್ಕೆ ಪ್ರದರ್ಶನ ಉದ್ಘಾಟಿಸಿ ನವರಾತ್ರಿಯ ಸಂದೇಶ ನೀಡಲಿರುವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net