

ಮೈಸೂರು: ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕರ್ಜನ್ ಪಾರ್ಕ್ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದಂತೆ ಅಲ್ಪಾವಧಿ ಮರು ಟೆಂಡರ್ ಯಾ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸಂಸ್ಥೆಯವರು ಸೆಪ್ಟೆಂಬರ್ 14ರಂದು ಸಂಜೆ 5 ಗಂಟೆಯೊಳಗಾಗಿ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಒಂದು ವೇಳೆ ನಿಗದಿತ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಅಲ್ಪಾವಧಿ ಮರು ಟೆಂಡರ್ ಯಾ ಬಹಿರಂಗ ಹರಾಜು ಸೆಪ್ಟೆಂಬರ್ 15 ರಂದು 11 ಗಂಟೆಗೆ ಜಿಲ್ಲಾ ತೋಟಗಾರಿಕೆ ಸಂಘ ಮೈಸೂರು ರವರ ಕಚೇರಿಯಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 7090665086 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.