

ಬೆಳಗಾವಿ:ನವರಾತ್ರಿ ಉತ್ಸವ ನಿಮಿತ್ತ ದುರ್ಗೆಯನ್ನು 9 ದಿನಗಳ ಕಾಲ ಶ್ರದ್ಧಾ, ಭಕ್ತಿ ಮತ್ತು ಸಡಗರದಲ್ಲಿಆರಾಧನೆ ಮಾಡಿದ ಜನರು ಮಂಗಳವಾರ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದರು.
ಮಂಗಳವಾರ ನಗರದ ನಾನಾ ಕಡೆಗಳಿಂದ ದೇವಿ ಹೊತ್ತ ಪಾಲಿಕೆಗಳು, ನಂದಿಕೋಲುಗಳು ವಾದ್ಯಪರಿಕರಗಳೊಂದಿಗಿನ ಭವ್ಯ ಮೆರವಣಿಗೆಯಲ್ಲಿ ಸಂಚರಿಸಿ ಕ್ಯಾಂಪ್ ಪ್ರದೇಶದ ಮೈದಾನದಲ್ಲಿಸೇರಿದ್ದರು
ಶೃಂಗಾರಗೊಂಡಿದ್ದ ಬಸವನನ್ನು ಕರೆತರಲಾಗಿತ್ತು. ದೇವಿ, ನಂದಿಕೋಲು, ಬಸವ ಮತ್ತು ಬನ್ನಿ ಪತ್ರಿಗೆ ವಿಧಿಬದ್ಧವಾಗಿ ಪೂಜಾ ಕೈಂಕರ್ಯ ನೆರವೇರಿಸಿ ಸೀಮೋಲ್ಲಂಘನೆ ಮಾಡುವ ಮೂಲಕ ದಸರಾ ಹಬ್ಬವನ್ನು ಪೂರ್ಣಗೊಂಡಿತು.