ಹಾರೋಹಳ್ಳಿ ಯಲ್ಲಮ್ಮ ದೇಗುಲದಲ್ಲಿ ದಸರಾ ಸಂಭ್ರಮ

dasara
dasara
Published on

ಹಾರೋಹಳ್ಳಿ: ಪಟ್ಟಣದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದಸರಾ ನಿಮಿತ್ತ ವಿಶೇಷವಾಗಿ ಅಲಂಕೃತಗೊಂಡು ಭಕ್ತರ ಕಣ್ಮನ ಸೆಳೆಯುತ್ತಿದೆ.

ನವರಾತ್ರಿ ಆರಂಭದ ದಿನದಿಂದಲೂ ದೇವಿಗೆ ಬಾಲ ತ್ರಿಪುರ ಸುಂದರಿ ಅಲಂಕಾರ, ಬ್ರಹ್ಮಚಾರಿಣಿ, ಅನ್ನಪೂರ್ಣೇಶ್ವರಿ, ಸ್ಕಂದಮಾತಾ, ಮಹಾಲಕ್ಷ್ಮೀ, ವಾರಾಹಿ, ಚಂಡಿಕಾ ಅಲಂಕಾರ ನೆರವೇರಿದ್ದು, ಸೋಮವಾರ ವೀಣೆ ಹಿಡಿದ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸಿದ್ದು, ಮಂಗಳವಾರ ದುರ್ಗಾದೇವಿ, ಬುಧವಾರ ರಾಜರಾಜೇಶ್ವರಿ ದೇವಿ ಅಲಂಕಾರದಲ್ಲಿ ಯಲ್ಲಮ್ಮ ದೇವಿ ದರ್ಶನವಾಗಲಿದೆ

ಹಲವು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಪಟ್ಟಣದ ಯಲ್ಲಮ್ಮ ದೇವಸ್ಥಾನವನ್ನು ನವ ವಧುವಿನಂತೆ ಸಿಂಗರಿಸಿ, ಹಬ್ಬದ ವಾತಾವರಣ ಸೃಷ್ಟಿಸಲಾಗುತ್ತಿದೆ. ಭಕ್ತರೂ ಸಹ ದೇವಿಯ ದರ್ಶನಕ್ಕೆ ತಂಡೋಪತಂಡವಾಗಿ ಹರಿದು ಬರುತ್ತಾರೆ.

ದಸರಾ ಗೊಂಬೆಗಳ ಪ್ರದರ್ಶನ ಯಲ್ಲಮ್ಮನ ದೇಗುಲದಲ್ಲಿ ದಸರಾ ಬೊಂಬೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, ನವ ದುರ್ಗೆ, ನವ ಲಕ್ಷ್ಮೀ ಮೂರ್ತಿಗಳು, ಮೈಸೂರು ಅರಮನೆ, ಚಾಮುಂಡೇಶ್ವರಿ ದೇಗುಲ, ಬೃಂದಾವನ, ಕೆಆರ್​ಎಸ್​, ದಸರಾ ಅಂಬಾರಿ, ಶ್ರೀ ವಿಷ್ಣು, ಆಂಜನೇಯ ಸಮೇತ ರಾಮ ಲಕ್ಷ$್ಮಣ, ನರಸಿಂಹ ಅವತಾರ, ಋಷಿ ಮುನಿಗಳ ಗೊಂಬೆಗಳು, ಶ್ರೀ ಕೃಷ್ಣನ ಬ್ರಹ್ಮಾಂಡ ರೂಪ, ಋಷಿ ಮುನಿಗಳ ಗೊಂಬೆಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ನವರಾತ್ರಿ ಹಿನ್ನೆಲೆಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಪ್ರತಿನಿತ್ಯ ಒಂದೊಂದು ಅಲಂಕಾರ ಮಾಡಲಾಗುತ್ತಿದೆ. ಅ.2ರ ಗುರುವಾರ ಮಹಾಚಂಡಿಕಾ ಹೋಮ ಹಮ್ಮಿಕೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. > ಲೀಲಾವತಿ ಜಯರಾಜ್​ ದೇವಾಲಯದ ನಿರ್ಮಾತೃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net