

ಮಡಿಕೇರಿ:
ನೂತನವಾಗಿ ಆಯ್ಕೆಯಾಗಿರುವ ದಸರಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿದ್ದರು.
ಮುಂದೆ ನಡೆಯಲಿರುವ ಐತಿಹಾಸಿಕ ದಸರಾ ಉತ್ಸವದ ಪೂರ್ವ ತಯಾರಿ ಬಗ್ಗೆ ಚರ್ಚೆ ಈ ವೇಳೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದಸರಾ ಸಮಿತಿಯ ಅಧ್ಯಕ್ಷೆ ಕಲಾವತಿ, ಕಾರ್ಯಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ದಸರಾ ಸಮಿತಿಯ ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಸೇರಿದಂತೆ ದಸರಾ ಸಮಿತಿಯ ಪ್ರಮುಖರು ಇದ್ದರು.