ಡಿಜೆ ಅಬ್ಬರವಿಲ್ಲದೆ ದಸರಾ ಸಂಪನ್ನ

dasara
Published on

ಮಡಿಕೇರಿ:

ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ಡಿಜೆ ಅಬ್ಬರವಿಲ್ಲದೆಯೇ ಈ ಬಾರಿಯ ಜನೋತ್ಸವ ೨೦೨೫ಕ್ಕೆ ಶುಕ್ರವಾರ ಬೆಳಗ್ಗೆ ತೆರೆÀ ಬಿದ್ದಿದೆ. ಗುರುವಾರ ಹಗಲಿಡೀ ಕಾಣಿಸಿಕೊಂಡಿದ್ದ ಮಳೆಯ ವಾತಾವರಣ ದಶಮಂಟಪಗಳ ಶೋಭಾಯಾತ್ರೆಗೆ ಅಡ್ಡಿಯಾಗುವ ಆತಂಕದ ಮಧ್ಯೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಮಂಜಿನ ನಗರಿಯಲ್ಲಿ ರಾತ್ರಿ ವೇಳೆ ಸೇರಿದ್ದರು. ಬಹುಮಾನ ವಿತರಣೆ ವೇಳೆ ಪ್ರತಿವರ್ಷದ ಸಂಪ್ರದಾಯ ಎಂಬAತೆೆ ಕೆಲವು ಸಮಿತಿಯವರ ಅಸಮಾಧಾನ ಸ್ಫೋಟ ಆಗಿ ಡಿವೈಎಸ್‌ಪಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು ಈ ಬಾರಿಯ ದಸರಾದ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿತು.

ಶಬ್ದಮಾಲಿನ್ಯದ ಬಗ್ಗೆ ನ್ಯಾಯಾಲಯಗಳ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಈ ಬಾರಿಯ ದಸರಾದಲ್ಲಿ ಡಿಜೆ ಬಳಸದಂತೆ ಪೊಲೀಸರು ಆರಂಭದಿAದಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಮೇಲಿಂದ ಮೇಲೆ ದಸರಾ ದಶಮಂಟಪಗಳ ಪ್ರಮುಖರ ಸಭೆ, ಡಿಜೆ ಬಳಕೆಯಿಂದ ಆಗುವ ಹಾನಿ ಬಗ್ಗೆ ಪ್ರಾತ್ಯಕ್ಷಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಕಾರ್ಯಕ್ರಮ, ಖ್ಯಾತನಾಮರಿಂದ ಡಿಜೆ ಬಳಕೆ ವಿರುದ್ಧ ಸಂದೇಶ, ಕೊನೆಗೆ ಕಾನೂನು ಕ್ರಮದ ಎಚ್ಚರಿಕೆ...ಹೀಗೆ ಎಲ್ಲಾ ರೀತಿಯ ಅಸ್ತçಗಳನ್ನು ಬಳಸಲಾಗಿತ್ತು.

ದಸರಾ ದಶಮಂಟ ಸಮಿತಿಯವರೇನೂ ಸುಮ್ಮನೆÀ ಇರಲಿಲ್ಲ. ಡಿಜೆ ಬಳಕೆಗೆ ಕಡಿವಾಣ ಹಾಕುವ ಮೂಲಕ ಪೊಲೀಸರು ಮಡಿಕೇರಿ ದಸರಾ ಆಚರಣೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ವಿವಿಧ ಮೂಲಗಳಿಂದ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದರು. ಸ್ತಬ್ಧ ಚಿತ್ರಗಳ ಪ್ರದರ್ಶನದ ವೇಳೆಯಲ್ಲಾದರೂ ಡಿಜೆ ಬಳಕೆಗೆ ಅವಕಾಶ ಕೊಡಿ ಎನ್ನುವ ಮನವಿಯನ್ನೂ ಮಾಡಿಕೊಂಡಿದ್ದರು. ಆದರೆ ಪೊಲೀಸರು ಯಾವುದಕ್ಕೂ ಜಗ್ಗಲಿಲ್ಲ.

ಕೊನೆಗೂ ಕಾನೂನಿಗೆ ಗೌರವ ನೀಡಿದ ದಸರಾ ದಶಮಂಟಪ ಸಮಿತಿಯವರು ದಸರಾ ದಿನ ನಿಗದಿತ ಪ್ರಮಾಣದ ಶಬ್ದ ಮಿತಿ ಒಳಗೆ ಡಿಜೆ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಹೇರಿಕೊಂಡು ಗುರುವಾರ ಮಧ್ಯಾಹ್ನ ಎಲ್ಲಾ ದೇವಾಲಯ ಸಮಿತಿಯವರಿಗೂ ಈ ಬಗ್ಗೆ ಸಂದೇಶ ರವಾನಿಸಿದರು. ಹಾಗಾಗಿ ಇದೇ ಮೊದಲ ಬಾರಿಗೆ ಡಿಜೆ ಅಬ್ಬರವಿಲ್ಲದೆ ಮಡಿಕೇರಿ ದಸರಾ ಶೋಭಾಯಾತ್ರೆ ನಗರದೊಳಗೆ ಸಂಚಾರ ನಡೆಸಿತು. ಶೋಭಾ ಯಾತ್ರೆ ಸೇರಿದ್ದ ದೊಡ್ಡ ಸಂಖ್ಯೆಯ ಯುವ ಸಮೂಹ ಇದರಿಂದ ನಿರಾಸೆಗೆ ಒಳಗಾಯಿತು. ಬಹುತೇಕರು ಒಂದು ಮಂಟಪದಿAದ ಮತ್ತೊಂದು ಮಂಟಪಕ್ಕೆ ಡಿಜೆ ಹುಡುಕಾಡುತ್ತಾ ಅಲೆದಾಡಿದರು. ಎಲ್ಲಾ ಕಡೆಯಲ್ಲೂ ಅಬ್ಬರವಿಲ್ಲದ ಡಿಜೆ ಶಬ್ದ ಕಂಡು ಮಂಕಾದರು...

ಈ ದಸರಾದಲ್ಲಿ ಡಿಜೆ ಬಳಕೆ ಕಡಿಮೆ ಆದ ಕಾರಣ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಗರದ ಹಿರಿ ತಲೆಮಾರು, ರೋಗಿಗಳು, ಗರ್ಭಿಣಿ, ಬಾಣಂತಿಯರೂ ಇದಕ್ಕಾಗಿ ದಸರಾ ದಶಮಂಟಪ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. ಸಾಂಪ್ರದಾಯಿಕ ಆಚರಣೆಗಳಿಗೆ ಯಾರ ವಿರೋಧವೂ ಇಲ್ಲ. ಆದರೆ ಆಚರಣೆಗಳ ನೆಪದಲ್ಲಿ ಇನ್ನೊಬ್ಬರಿಗೆ ತೊಂದರೆ ಮಾಡುವುದು ಎಷ್ಟು ಸರಿ ? ಐತಿಹಾಸಿಕ ಮಡಿಕೇರಿ ದಸರಾ ಇದೇ ರೀತಿಯಲ್ಲಿ ಪೂರ್ವಕಾಲದ ಸಂಪ್ರದಾಯಗಳೊAದಿಗೆ ಮುಂದುವರಿಯಲಿ ಎನ್ನುವ ಆಶಯ ಸಾರ್ವಜನಿಕರಿಂದ ವ್ಯಕ್ತವಾಯಿತು.

ಈ ವರ್ಷ ಮೇ ತಿಂಗಳಿನಿAದ ಶುರುವಾಗಿದ್ದ ಮಳೆಗಾಲ ಅಕ್ಟೋಬರ್ ಬಂದರೂ ಮುಂದುವರಿದಿದ್ದರಿAದ ಇದರ ಕಾರ್ಮೋಡ ಮಡಿಕೇರಿ ದಸರಾದ ಮೇಲೂ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಕ್ಕೂ ಮೊದಲು ದಸರಾ ದಶಮಂಟಪ ಸಮಿತಿ ಪ್ರಮುಖರು ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತಪ್ಪನ ಸನ್ನಿಧಿಗೆ ತೆರಳಿ ದಶಮಂಟಪಗಳ ಶೋಭಾಯಾತ್ರೆ ದಿನ ಮಳೆಯಿಂದ ಸಮಸ್ಯೆ ಆಗದಂತೆ ಪ್ರಾರ್ಥನೆ ಸಲ್ಲಿಸಿದ್ದರು.

ಇದರ ಪರಿಣಾಮವೋ ಎಂಬAತೆ ದಿನಪೂರ್ತಿ ಸುರಿಯುತ್ತಿದ್ದ ಮಳೆ ಗುರುವಾರ ಸಂಜೆ ಆಗುತ್ತಿದ್ದಂತೆ ಕಡಿಮೆ ಆಯಿತು. ದಶಮಂಟಪಗಳ ಮೆರವಣಿಗೆ ಆರಂಭವಾಗುವ ವೇಳೆಗೆ ಆಗಾಗ್ಗೆ ತುಂತುರು ಮಳೆ ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಆಗಲಿಲ್ಲ.

ಮಳೆ ಇರುವುದರಿಂದ ದಸರಾ ವೀಕ್ಷಣೆಗೆ ಆಗಮಿಸುವವರ ಸಂಖ್ಯೆಯೂ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಗುರುವಾರ ಸಂಜೆ ತನಕವೂ ಮಡಿಕೇರಿಯಲ್ಲಿ ಸಾಮಾನ್ಯವಾಗಿ ದಸರಾದಲ್ಲಿ ಕಾಣುತ್ತಿದ್ದ ಜನಜಂಗುಳಿ ಇರಲಿಲ್ಲ. ಆದರೆ ಹೊತ್ತೇರುತ್ತಿದ್ದಂತೆಯೇ ಎಲ್ಲಾ ದಿಕ್ಕುಗಳಿಂದ ಮಡಿಕೇರಿ ಕಡೆಗೆ ಜನಪ್ರವಾಹ ಆಗಮಿಸಲಾರಂಭಿಸಿತು. ರಾತ್ರಿ ೧೦ ಗಂಟೆ ಆಗುತ್ತಿದ್ದಂತೆಯೇ ಜನ ಸಂಚಾರ ಹೆಚ್ಚಾಗಿ ಮಡಿಕೇರಿ ದಸರಾ ಎಂದಿನ ಲಯಕ್ಕೆ ಬಂದAತೆ ಭಾಸವಾಯಿತು. ಗುರುವಾರ ಮಧ್ಯಾಹ್ನದಿಂದಲೇ ಮೈಸೂರಿನಿಂದ ಮಡಿಕೇರಿ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ಕುಶಾಲನಗರದಿಂದ ಮಡಿಕೇರಿ ತನಕ ಭಾರಿ ವಾಹನ ದಟ್ಟಣೆ ಇತ್ತು. ಸಂಜೆ ೪ ಗಂಟೆಯಿAದ ಮಡಿಕೇರಿ ನಗರದೊಳಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮಂಟಪಗಳ ಪೈಕಿ ಅತ್ಯುತ್ತಮ ಮಂಟಪಕ್ಕೆ ಬಹುಮಾನಗಳನ್ನು ಕೊಡುವ ಪರಿಪಾಟ ಬೆಳೆದು ಬಂದಿದೆ. ಇಲ್ಲಿ ಬಹುಮಾನ ಪಡೆದುಕೊಳ್ಳುವುದಕ್ಕಾಗಿಯೇ ಹತ್ತು ದೇವಾಲಯಗಳೂ ಪೈಪೋಟಿ ಮೇಲೆ ಮಂಟಪಗಳನ್ನು ತಯಾರಿಸುತ್ತವೆ. ೨೫-೫೦ ಲಕ್ಷ ರೂ. ತನಕ ಒಂದೊAದು ಮಂಟಪಕ್ಕೆ ವ್ಯಯಿಸಲಾಗುತ್ತದೆ. ಶೋಭಾಯಾತ್ರೆ ಮುಗಿದ ನಂತರ ಫಲಿತಾಂಶ ಪ್ರಕಟಿಸಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಬಹುಮಾನ ಸಿಗದವರು ಈ ಸಂದರ್ಭ ಸಿಟ್ಟಾಗುವುದು, ಘೋಷಣೆಗಳನ್ನು ಕೂಗುವುದು, ವೇದಿಕೆ ಮೇಲೆ ಅರಚಾಡುವುದು ಕೂಡ ಪ್ರತಿ ವರ್ಷದ ಸಂಪ್ರದಾಯ ಎನ್ನುವಂತೆ ನಡೆದುಕೊಂಡು ಬಂದಿದೆ.

ಈ ವರ್ಷದ ದಸರಾವೂ ಇದರಿಂದ ಹೊರತಾಗಿರಲಿಲ್ಲ. ಮಂಟಪವೊAದರ ಸಮಿತಿ ಸದಸ್ಯರು ಫಲಿತಾಂಶ ಘೋಷಣೆಗೆ ಮೊದಲೇ ತಮ್ಮ ಅಸಮಾಧಾನ ಹೊರಹಾಕಿದರು. ಇದು ವಿಕೋಪಕ್ಕೆ ಹೋಗಿ ವೇದಿಕೆ ಮೇಲೆ ಬಂದು ಪೋಡಿಯಂ, ಪ್ರಶಸ್ತಿಫಲಕಗಳನ್ನು ಒಡೆದು ಹಾಕಿದರು. ನಿಯಂತ್ರಿಸಲು ಬಂದ ಪೊಲೀಸರ ಮೇಲೂ ತಮ್ಮ ಆಕ್ರೋಶ ಹೊರಹಾಕಿದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಸೂರಜ್ ಮೇಲೆ ಹಲ್ಲೆ ಪ್ರಯತ್ನವೂ ನಡೆಯಿತು ಎನ್ನಲಾಗಿದ್ದು, ನಂತರ ವೇದಿಕೆಯಿಂದ ಅವರನ್ನು ತಳ್ಳಿದ ಸಂದರ್ಭ ಕೆಳಕ್ಕೆ ಬಿದ್ದು ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಯಕ್ಷಿತ್ ಎಂಬಾತನನ್ನು ಬಂಧಿಸಲಾಗಿದೆ.

ಇAಥ ಗಲಾಟೆ ಬಗ್ಗೆ ಕೊಡಗು ಎಸ್‌ಪಿ ಕೆ. ರಾಮರಾಜನ್ ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ಅತ್ಯುತ್ತಮ ಮಂಟಪಗಳಿಗೆ ಬಹುಮಾನ ಕೊಡುವುದರಿಂದ ಮಂಟಪಗಳ ಮಧ್ಯೆ ಅನಾರೋಗ್ಯಕರ ಪೈಪೋಟಿ ಉಂಟಾಗುತ್ತದೆ. ಈ ಹಿಂದಿನ ವರ್ಷಗಳಲ್ಲೂ ಇಂಥ ಘಟನೆಗಳು ಸಂಭವಿಸಿದೆ. ಇದರಿಂದ ಪೊಲೀಸರಿಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾಗುತ್ತದೆ. ಹಾಗಾಗಿ ಬಹುಮಾನವನ್ನು ಎಲ್ಲಾ ಮಂಟಪಗಳಿಗೂ ಹಂಚುವAತೆ ಸಲಹೆ ನೀಡಿದ್ದರು. ಆದರೆ ಈ ಸಲಹೆ ದಸರಾ ದಶಮಂಟಪಗಳಿಗೆ ಸಹ್ಯವಾಗಿರಲಿಲ್ಲ. ಹಾಗಾಗಿ ಡಿವೈಎಸ್‌ಪಿ ಗಾಯಗೊಂಡಿರುವುದು ಮಡಿಕೇರಿ ದಸರಾಕ್ಕೆ ಕಪ್ಪು ಚುಕ್ಕೆಯಾಗಿ ಅಂಟಿಕೊಳ್ಳುವAತಾಯಿತು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ದಶ ಮಂಟಪಗಳಿಗೆ ಬಹುಮಾನ ವಿತರಣೆ ಸಂದರ್ಭ ಯಕ್ಷಿತ್ ಎಂಬಾತ ವೇದಿಕೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭ ಪರಿಸ್ಥಿತಿ ನಿಯಂತ್ರಿಸಲು ಹೋಗಿದ್ದ ಡಿವೈಎಸ್ಪಿ ಸೂರಜ್ ಅವರನ್ನು ಯಕ್ಷಿತ್ ವೇದಿಕೆ ಮೇಲಿಂದ ತಳ್ಳಿದರು. ವೇದಿಕೆಯಿಂದ ಕೆಳಕ್ಕೆ ಬಿದ್ದ ಸೂರಜ್ ಅವರಿಗೆ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದೆ. ಸೂರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯಕ್ಷಿತ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಪ್ರತೀ ವರ್ಷ ಬಹುಮಾನ ವಿತರಣೆ ಸಂದರ್ಭ ಗಲಭೆಗಳಾಗುತ್ತಿರುವುದು ವಿಷಾದÀನೀಯ. ಪ್ರತೀ ಸಭೆಯಲ್ಲಿಯೂ ನಾನು ಈ ಬಗ್ಗೆ ಹೇಳಿದ್ದೆ. ಆದರೆ ಈ ವರ್ಷ ಕೂಡ ಬಹುಮಾನ ವಿತರಣೆ ಸಂದರ್ಭ ಗಲಭೆಗಳಾಗಿದೆ. ಮುಂದೆ ಯಾವ ರೀತಿ ಕ್ರಮಕೈಗೊಳ್ಳಬೇಕೆಂದು ಪರಿಶೀಲಿಸುತ್ತೇವೆ.

ಕೆ. ರಾಮರಾಜನ್, ಕೊಡಗು ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net