

ಮಡಿಕೇರಿ:
ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ದಸರಾ ದಶಮಮಂಟಪ ಸಮಿತಿ ವತಿಯಿಂದ ದೀಪಾಲಂಕಾರ, ರಂಗೋಲಿ ಹಾಗೂ ಸೆಲ್ಫಿ ಸ್ಪರ್ಧೆ ಆಯೋಜಿಸಲಾಗಿದೆ.
ಸೆ.22 ರಂದು ಕರಗೋತ್ಸವ ಆರಂಭಗೊಳ್ಳುವ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸಬೇಕು. ಅಲ್ಲದೆ ಮನೆಗಳ ಮುಂದೆ ಸುಂದರವಾದ ವರ್ಣರಂಜಿತ ಚುಕ್ಕಿ ರಂಗೋಲಿಯನ್ನು ಬಿಡಿಸಬೇಕು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ದಸರಾ ದಶಮಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಅಣ್ವೇಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಸ್ಪರ್ಧೆ ಆಯೋಜಿಸಲಾಗಿದ್ದು, ಆಸಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ಕುಟುಂಬದ ಸದಸ್ಯರ ಸಹಿತ ಸೆಲ್ಫಿ ತೆಗೆಯಬೇಕು. ವಿಜೇತ ಕುಟುಂಬಕ್ಕೆ ಆಕರ್ಷಕ ಬಹುಮಾನ ನೀಡಲಾಗುವುದು. ಸೆಲ್ಫಿ ಸ್ಪರ್ಧೆಗಾಗಿ ಮೂರು ಸೆಲ್ಫಿ ಪಾಯಿಂಟ್‌ಗಳನ್ನು ನಿಗಧಿ ಮಾಡಲಾಗಿದೆ. ಬನ್ನಿ ಮಂಟಪದ ಮುಂಭಾಗದ ಅಕ್ಷಯ ಲಾಡ್ಜ್, ಮಹದೇವಪೇಟೆಯ ಅರವಿಂದ್ ಜ್ಯುವೆಲ್ಲರಿ ಹಾಗೂ ಸ್ಕೆöÊಗೋಲ್ಡ್ ಎದುರು ಸೆಲ್ಫಿ ತೆಗೆಯಬೇಕು.
ಸೆಲ್ಫಿ ಪಾಯಿಂಟ್‌ನಲ್ಲಿ ಪೂರ್ಣ ಪ್ರಮಾಣದ ಫೋಟೋ ತೆಗೆದು ಸಮಿತಿ ನೀಡುವ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.ಸಾರ್ವಜನಿಕರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಡಿಕೇರಿ ದಸರಾ ಜನೋತ್ಸವದ ಆಕರ್ಷಣೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಸಂಘಟಕರನ್ನು ಸಂಪರ್ಕಿಸಬಹುದಾಗಿದೆ.