ಕಟಗೇರಿ ದಾಸರಿಗೆ ಸಂಯುತಾ ಪ್ರತಿಷ್ಠಾನ ಗೌರವ

IMG-20240210-WA0015-1.jpg
Published on

ಹುಬ್ಬಳ್ಳಿ: ಪುರ ಅಂದರೆ ದೇಹ ಎಂರ್ಬಥವೂ ಇದೆ. ದೇಹ ಧಾರಣ ಮಾಡಿದ ಆತ್ಮವೂ ಸದಾಚಾರ, ಸತ್ಕಾರ್ಯಗಳ ಸಾಧನೆಯಿಂದ ವಿಠಲನತ್ತ ಸಾಗುವುದೇ ಆಗಿದೆ. ಈ ಕಾರಣಕ್ಕಾಗಿ ಪುರಂದರದಾಸರು ಕೀರ್ತನೆಗಳ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸಾಹಿತ್ಯದೊಂದಿಗೆ ಮಾರ್ಗ ನೀಡಿದ್ದಾರೆ ಎಂದು ಪಂ. ಪಾಂಡುರಂಗಾಚಾರ್ಯ ಹುನಗುಂದ (ಜಾಲಿಹಾಳ) ಹೇಳಿದರು.

ಸಂಯುತಾ ಪ್ರತಿಷ್ಠಾನವು ಇಲ್ಲಿಯ ನಂಜನಗೂಡು ರಾಯರ ಮಠದ ಸುಜಯೀಂದ್ರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ "ಪುರಂದರೋತ್ಸವ'ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದಾಸರು ಜನರಿಗೆ ಮುಟ್ಟುವ ರೀತಿಯಲ್ಲಿ ಅದ್ಭುತ ಮತ್ತು ಪರಿಣಾಮಕಾರಿಯಾಗಿ ಕೀರ್ತನೆಗಳನ್ನು ನೀಡಿ ಸಮಾಜವನ್ನು ತಿದ್ದಲು ಯತ್ನಿಸಿವರು ಎಂದು ಬಣ್ಣಿಸಿದರು.

ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪದ್ಯ, ಸಾಹಿತ್ಯ ಹಾಗೂ ಸಂಗೀತದ ಮೂಲಕ ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ ದಾಸಶ್ರೇಷ್ಠ ಪುರಂದರ ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಕೇಂದ್ರ ಸಚಿವರ ಹೆಚ್ಚುವರಿ ಆಪ್ತ ಕಾರ್ಯದಶಿರ್ ಮುರಲೀಧರ ಮಳಲಿ, ನಂಜನಗೂಡು ರಾಯರ ಮಠದ ವ್ಯವಸ್ಥಾಪಕ ವೇಣುಗೋಪಾಲಾಚಾರ್ಯ ಮಾತನಾಡಿದರು. ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್. ಪರ್ವತಿ, ಸಂಸ್ಥೆ ನಡೆದು ಬಂದ ಹಾದಿ ಮತ್ತು ಯೋಜನೆಗಳನ್ನು ವಿವರಿಸಿದರು.

ಸುಶೀಲೇಂದ್ರಾಚಾರ್ಯ ಕುಂದರಗಿ ನಿರೂಪಿಸಿದರು. ಸಂಯುತಾ ಪ್ರತಿಷ್ಠಾನದ ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ ಸ್ವಾಗತಿಸಿದರು. ಜನಮೇಜಯ ಉಮ್ಮಜಿರ್ ವಂದಿಸಿದರು.

ಭಜನಾ ಮಂಡಳಿಗಳ ಸದಸ್ಯರು ಸಂಗೀತ ಪ್ರಸ್ತುತ ಪಡಿಸಿದರು. ಪಾಂಡುರಂಗಾಚಾರ್ಯ ಹುನಗುಂದ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎ.ಸಿ. ಗೋಪಾಲ, ಬಿಂದುಮಾಧವ ಪುರೋಹಿತ, ಪರೀಕ್ಷಿತಾಚಾರ್ಯ ಉಮ್ಮಜಿರ್, ವಿಲಾಸ ದೇಶಪಾಂಡೆ, ಇತರರು ಇದ್ದರು.

ಪ್ರಶಸ್ತಿ ಪ್ರದಾನ:
ಪಂ. ದಾಮೋದರಾಚಾರ್ಯ ಉರ್ಮಜಿ ಅವರ ಸ್ಮರಣಾರ್ಥ ಅನಂತಾಚಾರ್ಯ ಕಟಗೇರಿ ದಾಸರಿಗೆ "ಸಂಯುತಾ ಪುರಂದರ ಪ್ರಶಸ್ತಿ' ಪ್ರದಾನ ಮಾಡಲಾಯಿತು. 10 ಸಾವಿರ ನಗದು ಮತ್ತು ಫಲಕ, ನಂಜನಗೂಡು ರಾಯರಮಠದಿಂದ ಮತ್ತು ಉತ್ತರಾದಿಮಠದಿಂದ ಶೇಷವಸ್ತ್ರಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಭಜನಾ ಮಂಡಳಗಳು, ಅನೇಕ ಗಣ್ಯರು ದಾಸರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net