ಡಿ.ಸಿ.ಮನ್ನಾ ಭೂಮಿ ಮರುಹಂಚಿಕೆಗೆ ಆಗ್ರಹ

udp-18-dasamsa protest
Published on

ಉಡುಪಿ: ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಭೂಮಿಯನ್ನು ಅರ್ಹ ಭೂರಹಿತ ಪ.ಜಾತಿ ಮತ್ತು ಪಂಗಡದ ಜನರಿಗೆ ಮರುಹಂಚಿಕೆ ಮಾಡಬೇಕು. ಜಿಲ್ಲೆಯ ಅಕ್ರಮ&-ಸಕ್ರಮ ಸಮಿತಿಗಳು ಭೂ ಮಂಜೂರಾತಿ ಅಧಿನಿಯಮ ಪ್ರಕಾರ ಲಭ್ಯ ಭೂಮಿಯಲ್ಲಿ ಶೇ. 50ರಷ್ಟು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು. ದಲಿತರ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್​ ಮಾಸ್ತರ್​ ಆಗ್ರಹಿಸಿದರು.

ಉಡುಪಿ ತಾಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್​ವಾದ) ವತಿಯಿಂದ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಮುಂದೆ ದಲಿತರ ಭೂಮಿ ಮತ್ತು ವಸತಿ ಹಕ್ಕಿಗೆ ಆಗ್ರಹಿಸಿ ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರತಿಭಟನೆ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಟನೆ ಮುಖಂಡರಾದ ಮಾರುತಿ ಕೊರಗ, ಲೋಹಿತ್​ ಕುಮಾರ್​, ರವಿ, ಬಸವರಾಜ್​, ಶಂಕರ್​ ದಾಸ್​ ಚೆಂಡ್ಕಳ ಮೊದಲಾದವರು ಉಪಸ್ಥಿತರಿದ್ದರು. ತಹಶೀಲ್ದಾರ್​ ಗುರುಪ್ರಸಾದ್​ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿದರು.

ಎಲ್ಲಾ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ

ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಕಾಪು, ಬೈಂದೂರು, ಹೆಬ್ರಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಂಘಟನೆಯ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್​ ರ್ಬಿತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಶಾಮ ಸುಂದರ್​ ತೆಕ್ಕಟ್ಟೆ, ಸುರೇಶ್​ ಹಕ್ಲಾಡಿ, ಮಂಜುನಾಥ ನಾಗೂರು, ಅಣ್ಣಪ್ಪ ನಕ್ರೆ, ದೇವು ಹೆಬ್ರಿ, ಭಾಸ್ಕರ್​ ನಿಟ್ಟೂರು ತಾಲೂಕು ಸಂಚಾಲಕರಾದ ಕೆ.ಸಿ.ರಾಜು ಬೆಟ್ಟಿನಮನೆ ಕುಂದಾಪುರ, ಶಿವರಾಜ್​ ಬೈಂದೂರು, ಹರೀಶ್​.ಕೆ.ಡಿ.ಬ್ರಹ್ಮಾವರ, ಅಣ್ಣಪ್ಪ ಮಾಸ್ತರ್​ ಹೆಬ್ರಿ, ರಾಜೇಂದ್ರ ಮಾಸ್ತರ್​ ಕಾಪು ಮತ್ತು ಹೂವಪ್ಪ ಮಾಸ್ಟರ್​ ಕಾರ್ಕಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net