

ತಿ.ನರಸೀಪುರ: ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಸಹನೆ ಮತ್ತು ದ್ವೇಷದ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, ದೇಶದ್ರೋಹ ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಮೆರವಣಿಗೆಯನ್ನು ಪ್ರಾರಂಭಿಸಿದರು. ಹಳೇ ಪ್ರೈಮರಿ ಸ್ಕೂಲ್ ರಸ್ತೆ, ಲಿಂಕ್ ಹಾಗೂ ಕಾಲೇಜು ರಸ್ತೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಕೆಲ ತಾಸು ಧರಣಿ ಕುಳಿತರು. ಚಿತ್ರಮಂದಿರ ವೃತ್ತ ಹಾಗೂ ಖಾಸಗಿ ಬಸ್ ನಿಲ್ದಾಣದ ವೃತ್ತಗಳಲ್ಲಿ ಅಮಿತ್ ಷಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿದರು. ನಂತರ ಶಿರಸ್ತೇದಾರ್ ಮಂಜುಳಾ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾ.ಪಂ. ಮಾಜಿ ಸದಸ್ಯ ರಾಮಲಿಂಗಯ್ಯ, ಯಜಮಾನರಾದ ಕೈಯಂಬಳ್ಳಿ ಕೃಷ್ಣ, ಗಿರಿಯಯ್ಯ, ದಸಂಸ ಜಿಲ್ಲಾ ಸಂಚಾಲಕರಾದ ಸಿ.ಉಮಾಮಹದೇವ, ಬನ್ನಹಳ್ಳಿ ಸೋಮಣ್ಣ, ತಾಲೂಕು ಸಂಚಾಲಕರಾದ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಹೋಬಳಿ ಸಂಚಾಲಕ ತಲಕಾಡು ಆನಂದ್, ಅಶ್ವಿನಿ, ಲಾವಣ್ಯ, ಮುಖಂಡರಾದ ಬಸವರಾಜು, ಸಿ.ಪುಟ್ಟಮಲ್ಲಯ್ಯ, ಕಿರಗಸೂರು ರಜನಿ, ಉಮೇಶ್, ನಾಗರಾಜಮೂರ್ತಿ, ಶಿವಯ್ಯ, ನಾಗೇಶ್, ಸುರೇಶ್, ರಂಗರಾಮು, ಸಿದ್ದರಾಜು, ಶಿವಕುಮಾರ್, ಶಶಿಕುಮಾರ್, ಲಕ್ಷ್ಮಣ್, ಸೋಮಣ್ಣ, ಸಿದ್ದು, ದಕ್ಷಿಣಮೂರ್ತಿ, ಸಿದ್ದರಾಜು, ಕುಮಾರ, ಎಂ.ಬಿ.ಲಿಂಗರಾಜು, ಮಹೇಶ್, ರಾಜು, ವೆಂಕಟೇಶ್, ರಾಜು, ಸೋಮಣ್ಣ, ಹೊನ್ನಯ್ಯ, ನಾಗರಾಜು, ಶಿವಣ್ಣ, ಲಕ್ಷ್ಮಣ್, ಮಹದೇವ್, ಕೃಷ್ಣ, ಶಿವಣ್ಣ , ಕೃಷ್ಣ, ಶಿವು, ಮುರಳಿ, ಶಿವನಂಜ, ಆನಂದ್, ಶಿವಣ್ಣ, ಶಾಂತಕುಮಾರ್, ಶಂಕರಮೂರ್ತಿ, ಮಲ್ಲಯ್ಯ, ರವಿ, ಶಿವಕುಮಾರ್,ಲಿಂಗರಾಜು, ಶ್ರೀನಿವಾಸ್, ರಾಜೇಶ್, ನಂಜುಂಡಯ್ಯ ಇತರರು ಇದ್ದರು.