ಖಾಸಗಿ ಫೈನಾನ್ಸ್ ಸಂಸ್ಥೆಗಳ ಹಾವಳಿ ತಪ್ಪಿಸಿ

1tvk02 dss
Published on

ತುರುವೇಕೆರೆ: ಖಾಸಗಿ ಫೈನಾನ್ಸ್ ಸಂಸ್ಥೆಗಳ ಹಾವಳಿ ತಾಲೂಕಿನಲ್ಲಿ ಹೆಚ್ಚಾಗಿದ್ದು, ಹಳ್ಳಿಗಳಲ್ಲಿ ಸಾಲದ ಕಂತು ವಸೂಲಿ ಮಾಡುವ ನೆಪದಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ರಾಮಾಂಜಿನಯ್ಯ ಆರೋಪಿಸಿದರು.

ತಾಲೂಕು ಕಚೇರಿ ಎದುರು ಬುಧವಾರ ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಆಗಸ್ಟ್‌ವರೆಗೂ ಸಾಲವಸೂಲಿ ಮಾಡದಂತೆ ಲಿಖಿತ ಆದೇಶ ಹೊರಡಿಸಿದ್ದರೂ ಹಳ್ಳಿಗಳಿಗೆ ತೆರಳಿದ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿ ಹಣ ಕಟ್ಟುವಂತೆ ಮಹಿಳೆಯರನ್ನು ಒತ್ತಾಯಿಸುತ್ತಿದ್ದಾರೆ. ಕರೊನಾ ದಿನೇದಿನೆ ಹೆಚ್ಚುತ್ತಿದ್ದು, ಹಳ್ಳಿಗಳಲ್ಲಿ ಸಾಮಾನ್ಯ ಜನರಿಗೆ ಕೂಲಿ ಸಿಗುತ್ತಿಲ್ಲ, ಸರ್ಕಾರದ ಆದೇಶ ಪಾಲಿಸದ ಸಂಸ್ಥೆಗಳ ಪರವಾನಗಿ ರದ್ದುಪಡಿಸಬೇಕು. ಕರೊನಾ ಹಾವಳಿ ತಹಬದಿಗೆ ಬರುವವರೆವಿಗೂ ಹಣ ವಸೂಲಿ ಮಾಡದಂತೆ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ಬೊಮ್ಮೇನಹಳ್ಳಿಯಲ್ಲಿ ಖಾಸಗಿ ೈನಾನ್ಸ್ ವಸೂಲಿದಾರ ಸಾಲದ ಹಣ ಕಟ್ಟುವ ವಿಚಾರದಲ್ಲಿ ದೌರ್ಜನ್ಯದಿಂದ ವಸೂಲಿ ಮಾಡಲು ಮುಂದಾಗಿರುವುದು ಕಂಡು ಬಂದಿದ್ದು, ಜನಸಾಮಾನ್ಯರಿಗೆ ಮೂರ‌್ನಾಲ್ಕು ತಿಂಗಳಿಂದ ಸರಿಯಾದ ಕೂಲಿ ಸಿಗದೆ ದಿನ ನಿತ್ಯದ ಬದುಕು ಮೂರಾಬಟ್ಟೆಯಾಗಿದೆ. ೈನಾನ್ಸ್‌ಗಳ ಲೈಸೆನ್ಸ್ ರದ್ದುಮಾಡಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್ ನಯೀಮ್‌ಉನ್ನೀಸಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net