ಅನಿಷ್ಟ ಪದ್ಧತಿ ಹೋಗಲಾಡಿಸಲು ದಾಸ ಸಾಹಿತ್ಯ ಪೂರಕ

Dasa Sahitya supplement to eliminate evil practices
ವಿಜಯಪುರದ ಕಸಾಪ ಸಭಾಂಗಣದಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸೋಮೇಶ್ವರ ಸ್ವಾಮೀಜಿ, ಸುರೇಶ ಜತ್ತಿ, ರಾಜೇಸಾಬ ಶುನಗುತ್ತಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕನ್ನಡ ಸಾರಸ್ವತ ಲೋಕಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಾಗಿದೆ. 14&15ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ತನ್ನ ಪರಾಕಾಷ್ಠೆ ಮೆರೆಯುವ ಮೂಲಕ ಸಮಾಜದ ಅನಿಷ್ಟ ಪದ್ಧತಿ ಕಿತ್ತೊಗೆಯಲು ಶ್ರಮಿಸಿದ ಶ್ರೇಷ್ಠ ಸಾಹಿತ್ಯ ಎಂದು ಮಕಣಾಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ವಿವಿಧ ದತ್ತಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕನಕದಾಸರ ಪ್ರಚಾರ ಗೋಷ್ಠಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ದಾಸವರೇಣ್ಯರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ.ಎಫ್​. ಅಂಕಲಗಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕಲೆ, ಸಾಹಿತ್ಯ ಸಂಗೀತ ಹಾಗೂ ಸಾಂಸತಿಕ ಲೋಕವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಅತ್ಯಂತ ಕ್ರಿಯಾಶೀಲವಾಗಿ ನಡೆಸುತ್ತಿರುವುದು ಶ್ಲಾನೀಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಇವೆರಡು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಹರಿದಾಸರು ಕರ್ನಾಟಕ ಸಂಗೀತಕ್ಕೆ ಶ್ರೀಮಂತ ಕೊಡುಗೆ ನೀಡುವ ಮೂಲಕ ಕರ್ನಾಟಕದ ಧಾರ್ಮಿಕ ಮತ್ತು ಸಾಂಸತಿಕ ಜೀವನದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ ಎಂದರು.

ಖ್ಯಾತ ತತ್ವಪದ ಗಾಯಕ ಮಹೆತಾಬ ಕಾಗವಾಡ ಸಂತ ಕನಕದಾಸರ ಸಾಹಿತ್ಯದ ಪ್ರಚಾರ ಕುರಿತು ಉಪನ್ಯಾಸ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಾಯಿಣಿ ಹುಡೇದ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿವಯೋಗಿ ನಾಡಗೌಡ, ಸುವರ್ಣ ಸಂಗಪ್ಪ ಕಮದಾಳ, ಶ್ರೀಕಾಂತ ನಾಡಗೌಡ ಮತ್ತು ವಿಜಯಲಕ್ಷಿ$್ಮ ಹುಡೇದ ಆಗಮಿಸಿದ್ದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಮಹಮ್ಮದ್​ ಗೌಸ ಹವಾಲ್ದಾರ ಸ್ವಾಗತಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಸುರೇಶ ಜತ್ತಿ ವಂದಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜೇಸಾಬ ಶಿವನಗುತ್ತಿ, ಜಯಶ್ರೀ ಹಿರೇಮಠ, ವಿಜಯಲಕ್ಷಿ$್ಮ ಹಳಕಟ್ಟಿ, ಅಬ್ದುಲರಜಾಕ ಮುಲ್ಲಾ, ಆಶಾ ಬಿರಾದಾರ, ಬಿ.ಎಂ. ಆಜೂರ, ಎಸ್​.ಎಲ್​. ಇಂಗಳೇಶ್ವರ, ಗಂಗಮ್ಮ ರಡ್ಡಿ, ಶಿವಾಜಿ ಮೊರೆ, ಸಿದ್ರಾಮಪ್ಪ ಜಂಗಮಶೆಟ್ಟಿ, ಅರ್ಜುನ ಶಿರೂರ, ಅನಸೂಯ ದೊಡಮನಿ, ಪ್ರಮೋದಕುಮಾರ ಮಠಪತಿ, ಎಂ.ಎನ್​. ಪಠಾಣ, ಎ.ಎ. ಕೆಂಬಾವಿ, ಸಿ.ಎಸ್​. ಕಣಕಾಲಮಠ, ಎಂ.ಎಚ್​. ಬೀಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net