

ಶಿವಮೊಗ್ಗ: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರು ಆರೋಪಿಯಾಗಿದ್ದಾರೆ. ಇದೊಂದು ಚಿತ್ರರಂಗಕ್ಕೆ ಕಪ್ಪುಚುಕ್ಕೆ ಅನ್ನೋದು ಸಮಂಜಸವಲ್ಲ ಎಂದು ಚಿತ್ರ ನಟ ಅನಿರುದ್ಧ ತಿಳಿಸಿದರು.
ಪ್ರಕರಣದ ತನಿಖೆ ನಡೆಯುತ್ತಿದೆ. ದರ್ಶನ್ ಒಳ್ಳೆಯ ನಟ. ಅವರ ಜೀವನದಲ್ಲಿ ಈ ಘಟನೆ ಆಗಬಾರದಿತ್ತು. ಇದೊಂದು ದುಸ್ಥಿತಿ ಅಂತ ಹೇಳಬಹುದು. ಎಲ್ಲರಿಗೂ ಇದೊಂದು ಎಚ್ಚರಿಕೆ ಗಂಟೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಗಳ ಚರ್ಚೆ ಜೋರಾಗಿದೆ. ಆದರೆ ಅದನ್ನು ಹೇಗೆ ಬಳಸುತ್ತೇವೆ ಅನ್ನೋದನ್ನೂ ಚಿಂತಿಸಬೇಕು. ಎಲ್ಲದಕ್ಕೂ ಕಾನೂನಿದೆ. ಕಾನೂನಿಗೆ ನಾವು ಬದ್ಧವಾಗಿರಬೇಕು. ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಸಾಕಾಗಿತ್ತು. ಈ ಘಟನೆ ಆಗಬಾರದಿತ್ತು. ತುಂಬಾ ಬೇಜಾರಾಗುತ್ತಿದೆ ಎಂದರು.