ಜೈಲಿನಲ್ಲಿ ಡಿ ಗ್ಯಾಂಗ್​​​ಗೆ ರಾಜಾತಿಥ್ಯ? ಫೋಟೋ ಆಯ್ತು.. ಈಗ ವಿಡಿಯೋ ಕಾಲ್ 'ದರ್ಶನ'!

Untitled-design-2024-08-25T205754.419
Published on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ 65 ದಿನಗಳಿಂದ ಜೈಲಿನಲ್ಲಿದ್ದಾರೆ. ಭಾನುವಾರ (ಆಗಸ್ಟ್​ 25) ಬೆಳಗ್ಗೆ ಜೈಲಿನಲ್ಲಿರುವ ದರ್ಶನ್​ ಅವರ ಫೋಟೋ ರಿಲೀಸ್​ ಆಗಿತ್ತು. ಫೋಟೋ ರಿಲೀಸ್​​ ಆದ ಬಳಿಕ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಳಗ್ಗೆ ವೈರಲ್​ ಆಗಿದ್ದ ದರ್ಶನ್​ ಫೋಟೊಗೂ ಈಗ ರಿಲೀಸ್ ಆಗಿರುವ ವಿಡಿಯೋಗೂ ಸಾಮ್ಯತೆ ಇದೆ. ವಿಗ್​ ಇಲ್ಲದೆಯೇ ಫೋಟೋದಲ್ಲಿ ಹಾಗೂ ವಿಡಿಯೋದಲ್ಲಿ ದರ್ಶನ್​​ ಕಾಣಿಸಿಕೊಂಡಿದ್ದಾರೆ​​. ಎರಡರಲ್ಲೂ ಸಾಮ್ಯತೆ ಇರುವುದರಿಂದ ಈಗ ದರ್ಶನರದ್ದೆ ಎಂದು ಸಿಕ್ಕಿರುವ ವಿಡಿಯೋದಿಂದ  ಹಲವು ಅನುಮಾನ ಹುಟ್ಟಿಕೊಳ್ಳುತ್ತಿವೆ.

ಪೋಟೋದಲ್ಲಿ ದರ್ಶನ್​​ ಪರಪ್ಪನ ಅಗ್ರಹಾರದಲ್ಲಿ ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜತೆ ಕುಳಿತುಕೊಂಡು ಒಂದು ಕೈನಲ್ಲಿ ಕಾಫಿ ಕಪ್​ ಇನ್ನೊಂದು ಕೈನಲ್ಲಿ ಸಿಗರೇಟ್​ ಹಿಡಿದುಕೊಂಡಿರುವ ದೃಶ್ಯವನ್ನು ಕಾಣಬಹುದಾಗಿದೆ. ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್​ನನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈಗ ಹೊರಬಿದ್ದಿರುವ ವಿಡಿಯೋದಲ್ಲಿ ಯಾರೊಂದಿಗೋ ಮಾತನಾಡುತ್ತಿರುವ ದರ್ಶನ ಆತನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ವಿಡಿಯೋ ಕರೆಯಲ್ಲಿ ಇರುವವರು ಯಾರು, ಈ ವಿಡಿಯೋ ಹೇಗೆ ಹೊರಗಡೆ ಬಂತು ಎಂಬ ಸತ್ಯಾಸತ್ಯತೆಗಳು ಇನ್ನಷ್ಟೆ ತಿಳಿಯಬೇಕಿದೆ.

ಕೊಲೆ ಆರೋಪದಲ್ಲಿರುವ ದರ್ಶನ್​​ನನ್ನು ಜೈಲಿನಲ್ಲಿ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ ಎನ್ನಲಾಗುತಿತ್ತು. ಸ್ಪೆಷಲ್​ ಬ್ಯಾರಕ್​ನಲ್ಲಿರುವವರು ಒಬ್ಬರೆ ಇರುತ್ತಾರೆ. ಅವರಿಗೆ ಬ್ಯಾರಕ್​ ಮುಂದೆ ವಾಕ್​ ಮಾಡಲು ಹಾಗೂ ಪುಸ್ತಕಗಳನ್ನು ಓದಲು ಅವಕಾಶವಿರುತ್ತದೆ. ಆದರೆ ಮತ್ತೊಬ್ಬರೊಂದಿಗೆ ಮಾತನಾಡಲು ಅವಕಾಶವಿರುವುದಿಲ್ಲ ಎಂದು ಹೇಳಲಾಗುತ್ತೆ. ಆದರೆ ಈಗ ಸಿಕ್ಕಿರುವ ಫೋಟೋ ಮತ್ತು ವಿಡಿಯೋ ಕಾಲ್​ಗಳನ್ನು ನೋಡಿದ್ರೆ ಜೈಲಲ್ಲಿರುವ ದರ್ಶನ್​ಗೆ ರಾಜಾತಿಥ್ಯ ಸಿಗುತ್ತಿದೇಯಾ ಎಂಬ ಅನುಮಾನ ಮೂಡುತ್ತಿದೆ. ಹಾಗಾದ್ರೆ ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಐಷಾರಾಮಿ ಜೀವನ ನಡೆಸಲು ಯಾವುದೇ ತೊಂದರೆ ಇಲ್ವಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net