ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ಕೆಲವೇ ಕ್ಷಣಗಳಲ್ಲಿ ಆರಂಭ

darshan jan 13
Published on

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಹೊಸ ಮೆರುಗು ನೀಡಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಇಡೀ ದಿನ ರೋಡ್ ಶೋ ನಡೆಸಲಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಚಾರ ಕಾರ್ಯಕ್ಕೆ ಧುಮುಕುವರು. ಈಗಾಗಲೇ ದರ್ಶನ್ ನಿವಾಸಕ್ಕೆ ಮುನಿರತ್ನ ಧಾವಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ರೋಡ್ ಶೋ ಪ್ರಾರಂಭವಾಗಲಿದೆ.

ಜೆ.ಪಿ.ಪಾರ್ಕ್, ಪೀಣ್ಯ, ಎಚ್ ಎಂಟಿ ವಾರ್ಡ್, ಗೊರಗುಂಟಿಪಾಳ್ಯ, ರಾಜರಾಜೇಶ್ವರಿ ನಗರ ಇನ್ನಿತರ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡು ಬಿಜೆಪಿ ಹವಾ ಇನ್ನಷ್ಟು ಹೆಚ್ಚಿಸಲಿದ್ದಾರೆ. ದರ್ಶನ್​ ಪ್ರಚಾರ ಹಿನ್ನೆಲೆಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಸಹ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net