ಫಿಲ್ಮ್​ ಚೇಂಬರ್​ನಲ್ಲಿಂದು ಇಂದು ನಿರ್ಧಾರವಾಗಲಿದ್ಯಾ? ದರ್ಶನ್ ಸಿನಿ ಭವಿಷ್ಯ...

darshan 3
Published on

ಬೆಂಗಳೂರು: ರೇಣುಕಾ ಸ್ವಾಮಿ ಎನ್ನುವ ವ್ಯಕ್ತಿಯೊರ್ವನ  ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಅವರನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್  ಹಾಗೂ ಅವರ ಸಹಚರರು ಇದ್ದಾರೆ. ಈ ಪ್ರಕರಣ  ಬೆನ್ನಲ್ಲೇ ಈಗ ಫಿಲ್ಮ್ ಚೇಂಬರ್​ ಮಹತ್ವದ ಸಭೆಯನ್ನು  ಮಾಡಲು ನಿರ್ಧರಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ವೇಳೆ ದರ್ಶನ್ ಭವಿಷ್ಯ ನಿರ್ಧಾರ ಆಗೋ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.  ಇಂದು ಸಂಜೆ ನಾಲ್ಕು ಗಂಟೆಗೆ ಕಾರ್ಯಕಾರಿ ಸಮತಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ದರ್ಶನ್ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಈ ಸಭೆಯಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ.

ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿದ್ದಾರೆ. ‘ಆ ಸಭೆಯಲ್ಲಿ ಎನು ನಿರ್ಧಾರವಾಗುತ್ತೋ ಅದಕ್ಕೆ ನಾವೆಲ್ಲ ಬದ್ಧರಾಗಿರ್ತಿವಿ. ಎಲ್ಲರೂ ಒಂದು ನಿರ್ಧಾರಕ್ಕೆ ಬರುತ್ತಾರೆ. ಕೇಸ್ ಕಾನೂನಿನ ಅಂಗಳದಲ್ಲಿ ಇರುವುದರಿಂದ ನಾವು ಮಧ್ಯೆ ಹೋಗೋಕೆ ಆಗಲ್ಲ. ಬ್ಯಾನ್ ಮಾಡೋದು ಕಷ್ಟ, ಚಿತ್ರರಂಗ ಅವರಿಗೆ ಅಸಹಕಾರ ವ್ಯಕ್ತಪಡಿಸಬಹುದು ಅಷ್ಟೇ. ಬ್ಯಾನ್ ಅನ್ನೋ ಪದ ಪ್ರಜಾಪ್ರಭುತ್ವದಲ್ಲಿ ಇಲ್ಲ. ಈ ಬಗ್ಗೆ ನ್ಯಾಯಲಯ ಕ್ರಮ ತೆಗೆದುಕೊಳ್ಳುತ್ತದೆ. ಅಸಹಾಕಾರ ತೋರುವುದರಿಂದ ಅವರ ಸಿನಿಮಾಗಳನ್ನು ಯಾರೂ ನಿರ್ದೆಶನ ಮಾಡಲ್ಲ, ಯಾರು ನಿರ್ಮಾಣ ಮಾಡಲ್ಲ. ಕಾರ್ಮಿಕ ವರ್ಗ ಸಾಥ್ ಕೊಡುವುದಿಲ್ಲ’ ಎಂದು ಉಮೇಶ್ ಬಣಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net