ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಗೆ ಮಾಸ್ಟರ್ ಸ್ಟ್ರೋಕ್: ಕಾಂಗ್ರೆಸ್ ಅಭ್ಯರ್ಥಿ ಪರ ಇಂದು ನಟ ದರ್ಶನ್ ಮತಬೇಟೆ...!!!

Darshan
Published on

ಮಂಡ್ಯ: ನಟ ದರ್ಶನ್ ಏ.18ರಂದು ಮಳವಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮತಯಾಚನೆ ಮಾಡಲಿದ್ದಾರೆ. ಇದು ಮೈತ್ರಿ ಪಕ್ಷಕ್ಕೆ ಸಂಸದೆ ಸುಮಲತಾ ಮಾಸ್ಟರ್ ಸ್ಟ್ರೋಕ್ ನೀಡಿದಂತಾಗಿದೆ.

ಇತ್ತೀಚೆಗೆ ಸಂಸದೆ ನೇತೃತ್ವದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಸೇರುವ ನಿರ್ಧಾರ ಘೋಷಣೆ ಮಾಡಿದರು. ಅದರಂತೆ ದರ್ಶನ್ ಕೂಡ ಸುಮಲತಾ ಅವರು ಹೇಳಿದಂತೆ ನಡೆದುಕೊಳ್ಳಲಾಗುವುದು ಎಂದಿದ್ದರು. ಆದರೀಗ ಒಂದೆಡೆ ಸುಮಲತಾ ಮೈತ್ರಿ ಅಭ್ಯರ್ಥಿ ಎಚ್ಡಿಕೆ ಪರ ಮತಯಾಚನೆ ಮಾಡುತ್ತಿಲ್ಲ. ಅತ್ತ ನಟ ದರ್ಶನ್ ಕಾಂಗ್ರೆಸ್ ಪರ ಮತಬೇಟೆಗಿಳಿದಿರುವುದು ಕುತೂಹಲ ಮೂಡಿಸಿದೆ.

18ರಂದು ಬೆಳಗ್ಗೆ 9.45ಕ್ಕೆ ಹಲಗೂರು, 11ಕ್ಕೆ ಹುಸ್ಕೂರು, 11.45ಕ್ಕೆ ಹಾಡ್ಲಿ ವೃತ್ತ, 12.15ಕ್ಕೆ ಮಳವಳ್ಳಿ ಟೌನ್, 12.45ಕ್ಕೆ ಬೆಳಕವಾಡಿ, 1ಗಂಟೆಗೆ ಬಿ.ಜಿ ಪುರ, 1.15ಕ್ಕೆ ಸರಗೂರು ಹ್ಯಾಂಡ್‌ಪೋಸ್ಟ್, 1.30ಕ್ಕೆ ಪೂರಿಗಾಲಿ, 3ಗಂಟೆಗೆ ಟಿ.ಕಾಗೇಪುರ, 3.15ಕ್ಕೆ ದುಗ್ಗನಹಳ್ಳಿ, 3.45ಕ್ಕೆ ಬಂಡೂರು, 4ಗಂಟೆಗೆ ಹಿಟ್ಟನಹಳ್ಳಿಕೊಪ್ಪಲು, 4.15ಕ್ಕೆ ಮಿಕ್ಕೆರೆ, 4.45ಕ್ಕೆ ಕಿರುಗಾವಲು ಸಂತೆಮಾಳ, 5.30ಕ್ಕೆ ಚನ್ನಪಿಳ್ಳೆಕೊಪ್ಪಲಿನಲ್ಲಿ ದರ್ಶನ್ ಮತಯಾಚನೆ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net