ಅಂಧಕಾರ ಹೋಗಲಾಡಿಸಿದ ಯೇಸು

25LNG01
ಲಿಂಗಸುಗೂರಿನ ಲೂರ್ದಮಾತೆ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಫಾದರ್.ಆನಂದ ಕುಮಾರ್ ದಿವ್ಯಾಬಲಿ ಪೂಜೆಯ ಪ್ರಬೋಧನೆ ಸಲ್ಲಿಸಿ ಆಶೀರ್ವಚನ ನೀಡಿದರು.
Published on

ಲಿಂಗಸುಗೂರು; ಮನುಷ್ಯನಲ್ಲಿನ ಅಂಧಕಾರ ಮತ್ತು ಪಾಪಕೃತ್ಯದಿಂದ ಮುಕ್ತಗೊಳಿಸಿ ಸನ್ಮಾರ್ಗದೆಡೆಗೆ ಕೊಂಡೊಯ್ಯುವುದೇ ಕ್ರಿಸ್‌ಮಸ್ ಆಚರಣೆಯಾಗಿದೆ ಎಂದು ಲೂರ್ದಮಾತೆ ದೇವಾಲಯದ ಫಾದರ್.ಆನಂದ ಕುಮಾರ್ ಹೇಳಿದರು.

ಪಟ್ಟಣದ ಲೂರ್ದಮಾತೆ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ದಿವ್ಯಾಬಲಿ ಪೂಜೆಯ ಪ್ರಬೋಧನೆ ಸಲ್ಲಿಸಿ ಭಾನುವಾರ ಮಾತನಾಡಿದರು.
ವಿಶ್ವದಲ್ಲಿ ಅಶಾಂತಿ, ಅಂಧಕಾರ, ಅಜ್ಞಾನ ತಾಂಡವವಾಡುತ್ತಿರುವ ವೇಳೆ ಜನ್ಮ ತಾಳಿದ ಯೇಸು, ಶಾಂತಿ, ಸೌಹಾರ್ದತೆ, ಅನ್ಯೋನ್ಯತೆ ಮತ್ತು ಪರಸ್ಪರ ಬಾಂಧವ್ಯ ಬೆಸೆದು ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಲು ಸನ್ಮಾರ್ಗ ತೋರಿಸಿದ್ದಾನೆ.

ದೇವರ ಅನುಗ್ರಹದಿಂದ ಸುರಕ್ಷಿತರಾಗಿರುವ ಅರಿವು ಎಲ್ಲರಲ್ಲಿ ಬರಬೇಕು. ಮಹಿಳೆಯರು ಸ್ವಾವಲಂಬಿ ಮತ್ತು ಧೈರ್ಯದಿಂದ ಬದುಕು ಸಾಗಿಸಲು ಯೇಸುವಿನ ಸಂದೇಶಗಳು ಸಹಕಾರಿಯಾಗಿವೆ ಎಂದರು.

ಕಲಾ ತಂಡಗಳಿಂದ ಸುಮಧುರ ಗಾಯನ ಏರ್ಪಡಿಸಲಾಗಿತ್ತು. ಭಕ್ತರಿಗೆ ಕೇಕ್ ವಿತರಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಲಾಯಿತು. ಪಾಲನ ಸಮಿತಿಯ ಉಪಾಧ್ಯಕ್ಷೆ ಪ್ರಕಾಶಮ್ಮ ಮುರಾರಿ, ಕಾರ್ಯದರ್ಶಿ ಮೇಸಕ್, ಮುಖಂಡರಾದ ಎಚ್.ಬಿ.ಮುರಾರಿ, ಅರುಣ ಕುಮಾರ್, ದೇವನಾದನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net