

ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್‌ನನ್ನು ಪರಾರಿ ಮಾಡಿಸಿದ ಆರೋಪದಡಿ ಗೋವಾ ಡಿಎಆರ್ ಪೊಲೀಸ್ ಪೇದೆ ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿತ ಪರಾರಿಯಾಗಿದ್ದಾನೆ.
ಡಿಎಆರ್ ಪೊಲೀಸ್ ಪೇದೆ ಅಮಿತ್ ನಾಯಕ್‌ನನ್ನು ಬಂಧಿಸಿದ್ದು, ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಪರಾರಿಯಾಗಿದ್ದಾನೆ.
ಹಲವು ಪ್ರಕರಣಗಳಡಿ ಸಿದ್ದಿಕಿ ಕಸ್ಟಡಿಯಲ್ಲಿದ್ದ. ಈತನ ಕಾವಲಿಗೆ ಅಮಿತ್ ನಾಯಕ್‌ನನ್ನು ನಿಯೋಜಿಸಲಾಗಿತ್ತು. ಹಣ ಕೊಡುವುದಾಗಿ ಸಿದ್ದಿಕಿ, ಪೇದೆಯನ್ನು ನಂಬಿಸಿದ್ದ. ಇದರ ನಂಬಿಕೆ ಮೇಲೆ ಗೋವಾ ಕಸ್ಟಡಿಯಿಂದ ಪೇದೆ ಆರೋಪಿಯನ್ನು ಎಸ್ಕೇಪ್ ಮಾಡಿಸಿದ್ದ. ಇಬ್ಬರೂ ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ಗೋವಾ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಇಬ್ಬರನ್ನೂ ಬಂಧಿಸಿಲಾಗಿತ್ತಾದರೂ ಅಮಿತ್ ನಾಯಕ್ ಸಿಕ್ಕಿಬಿದ್ದಿದ್ದು, ಸಿದ್ದಿಕಿ ಪರಾರಿಯಾಗಿದ್ದಾನೆ.
ಸಿದ್ದಿಕಿ ಯಾರು?: ಸುಲೇಮಾನ್ ಸಿದ್ದಿಕಿ ಮೇಲೆ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳಲ್ಲಿ ಹಲವೆಡೆ ಪ್ರಕರಣ ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಬೆದರಿಕೆ, ವಂಚನೆ ಪ್ರಕರಣಗಳಲ್ಲಿ ಸಿದ್ದಿಕಿ ಭಾಗಿಯಾಗಿದ್ದನೆಂದು ಹೇಳಲಾಗುತ್ತಿದೆ. ಭೂ ಮಾಫಿಯಾ ದಂಧೆಯಲ್ಲಿಯೂ ಸಾರ್ವಜನಿಕರನ್ನು ಹೆದರಿಸುವುದು, ಅವರಿಂದ ಹಣ ಕೀಳುವುದು, ದರೋಡೆ ಮಾಡುತ್ತಿದ್ದ. ಹಾಗಾಗಿ ಗೋವಾ ಪೊಲೀಸರು ಈತನನ್ನು ಬಂಧಿಸಿದ್ದರು. ಶುಕ್ರವಾರ ರಾತ್ರಿ ಎಸ್ಕೇಪ್ ಆಗಿದ್ದ ಸಿದ್ದಿಕಿ, ಅಮಿತ್ ನಾಯಕ್‌ನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.