ಅಪಾಯಕಾರಿ ಮರ ತೆರವಿಗೆ ಆಗ್ರಹ

tree
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳು.
Published on

ಸುಳ್ಯ: ಸೋಣಂಗೇರಿ-ಗುತ್ತಿಗಾರು ರಸ್ತೆಯ ದೊಡ್ಡತೋಟ-ಗುಂಡಿಯಂಗಡಿ ಮಧ್ಯೆ ನಾಲ್ಕು ಒಣಗಿದ ಮರಗಳು ಅಪಾಯವನ್ನು ಆಹ್ವಾನಿಸುತ್ತಿವೆ.

ಎಲ್ಲ ಮರಗಳು ಮುಖ್ಯರಸ್ತೆಯತ್ತ ಬೀಳುವ ಸಂಭವ ಇದ್ದು, ರಸ್ತೆಯಲ್ಲಿ ಶಾಲಾ ಮಕ್ಕಳ ವಾಹನಗಳು ಸೇರಿದಂತೆ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಆತಂಕಗೊಂಡಿದ್ದಾರೆ. ಹೀಗಾಗಿ ಈ ಮರಗಳನ್ನು ತಕ್ಷಣ ತೆರವು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net