

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನೆಲೆಯಲ್ಲಿ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿರುವ ವಿದ್ಯುತ್ ಕಂಬದ ಬುಡ ದುರ್ಬಲವಾದಂತಿದ್ದು, ಅಪಾಯಕಾರಿಯಾಗಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ನೆಕ್ಕಿಲಾಡಿ ಶ್ರೀ ರಾಘವೇಂದ್ರ ಮಠದ ಬಳಿ ಈ ಹಿಂದೆ ಸ್ಥಾಪಿಸಿರುವ ಬೃಹತ್ ವಿದ್ಯುತ್ ಕಂಬದ ಬುಡದ ಸುತ್ತ ಒಂದಷ್ಟು ಮಣ್ಣು ಉಳಿಸಿ ಉಳಿದೆಲ್ಲಾ ಭಾಗದ ಮಣ್ಣನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ವಿದ್ಯುತ್ ಕಂಬದ ಬುಡ ಮಳೆಗಾಲದಲ್ಲಿ ಸಡಿಲಗೊಂಡು ಕಂಬ ಅಪಾಯಕಾರಿಯಾಗುವ ಸಾಧ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿತ ವಿಭಾಗ ವಿದ್ಯುತ್ ಕಂಬದ ಸುರಕ್ಷತೆ ಕಡೆಗೆ ಗಮನಹರಿಸಬೇಕಾಗಿದೆ.