ಅಪಾಯಕಾರಿಯಾಗಿ ಕಂಬ ಸಾಗಾಟ

mng--17 march tipper
Published on

ಮಂಗಳೂರು: ನಗರದ ಹೊರ ವಲಯದ ಎನ್‌ಐಟಿಕೆ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್‌ನಲ್ಲಿ ಸಿಮೆಂಟ್ ಕಂಬಗಳನ್ನು ಶುಕ್ರವಾರ ಅಪಾಯಕಾರಿಯಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂತು.


ಸಿಮೆಂಟ್ ಕಂಬ ಮುಕ್ಕಾಲು ಭಾಗ ವಾಹನದ ಹೊರಭಾಗದಲ್ಲಿ ಇದ್ದು, ಅಕಸ್ಮಾತ್ ವಾಹನ ಚಾಲಕ ಬ್ರೇಕ್ ಹಾಕಿದರೆ ಕಂಬ ಹೊರಬಂದು ಭಾರಿ ಅಪಘಾತ ವಾಗುವ ಸಾಧ್ಯತೆ ಇತ್ತು. ಕೆಲವು ದಿನಗಳ ಹಿಂದೆ ನಂತೂರುನಲ್ಲಿ ಅಪಾಯಕಾರ ರೀತಿಯಲ್ಲಿ ಕಬ್ಬಿಣದ ರಾಡ್ ತುಂಬಿದ ಟೆಂಪೋ ದಿಂದ ಸರಳುಗಳು ಹೊರ ಬಂದು ಕಾರಿನ ಒಳಗೆ ನುಗ್ಗಿದ್ದು, ಚಾಲಕ ಪವಾಡ ಸದೃಶ್ಯವಾಗಿ ಪಾರಾಗಿದ್ದರು. ನಗರದಲ್ಲಿ ಗೂಡ್ಸ್ ಟೆಂಪೋಗಳಲ್ಲಿ ಸರಳು, ಪೈಪ್, ಕಬ್ಬಿಣದ ಶೀಟ್‌ಗಳನ್ನು ಅಪಾಯಕಾರಿಯಾಗಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ನಿಗಾ ಇಟ್ಟು ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net