ಡೇಂಜರ್, ಪಿಕ್ ಪಾಕೆಟ್ ಬಿಜೆಪಿ ಸಂಸ್ಕೃತಿ

rbk timmapur
ಸಚಿವ ಆರ್. ಬಿ. ತಿಮ್ಮಾಪುರ
Published on

ರಬಕವಿ/ಬನಹಟ್ಟಿ: ರಾಜ್ಯದಲ್ಲಿ ಡೇಂಜರ್ ಎಲ್ಲಿದೆ? ಪಿಕ್ ಪಾಕೆಟ್ ಮಾಡುವ ಸಂಸ್ಕೃತಿ ಬಿಜೆಪಿಯದ್ದು, ತಮ್ಮ ಅನುಭವವನ್ನೇ ಜಾಹೀರಾತಿನ ಮೂಲಕ ಹಂಚಿಕೊಂಡಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಬಿಜೆಪಿ ವಿರುದ್ಧ ಹರಿಹಾಯ್ದರು.

ಮಂಗಳವಾರ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಮಾಂಸಕ್ಕೆ ವಿರೋಧಿಸುತ್ತಿರುವ ಬಿಜೆಪಿಗರು ತಾಕತ್ತಿದ್ದರೆ ಕಸಾಯಿ ಖಾನೆ ಬಂದ್ ಮಾಡಿಸಲಿ, ಇಡೀ ಜಗತ್ತಿನಲ್ಲೇ ಗೋಮಾಂಸದಲ್ಲಿ 2ನೇ ಸ್ಥಾನವಿದೆ. ಇದೇ ದೇಶಭಕ್ತಿ, ಧರ್ಮ, ಸಂಸ್ಕೃತಿಯ ಸಂಕೇತವೇ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರುಗಳೇ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ. ಇದು ಲವ್ ಜಿಹಾದ್ ಅಲ್ಲವೇ? ವಿನಾಕಾರಣ ಚುನಾವಣೆ ಸಂದರ್ಭ ಲವ್ ಜಿಹಾದ್, ಕೋಮು ದ್ವೇಷಗಳಂತಹ ಕಪಟತನವನ್ನು ಎಳೆದು ತರುವಲ್ಲಿ ಬಿಜೆಪಿಗರು ನಿಸ್ಸೀಮರೆಂದು ತಿಮ್ಮಾಪುರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದು, ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತನಾಡದ ಬಿಜೆಪಿ ಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದುದು ಎಲ್ಲರಿಗೂ ಗೊತ್ತಾಗುತ್ತದೆ. ಮಹಿಳೆಗೆ ಸೂಕ್ತ ಸ್ಥಾನ-ಮಾನ ಒದಗಿಸುವಲ್ಲಿ ವೈಲ್ಯ ಕಂಡಿದ್ದು, ಚುನಾವಣೆ ಬಂದಾಗ ಮಾತ್ರ ಮಹಿಳಾಪರ ಹೇಳಿಕೆ ನೀಡುವುದು ಬಿಜೆಪಿಗರ ಚಾಳಿ ಎಂದು ತಿಮ್ಮಾಪುರ ಕುಟುಕಿದರು.

ಬಾಗಲಕೋಟೆ ‘ಕೈ’ ಬಲಪಡಿಸಲು ಮತದಾರರು ಸಜ್ಜುL ಜಿಲ್ಲೆಗೆ ಸಂಯುಕ್ತ ಪಾಟೀಲ ಅಭ್ಯರ್ಥಿಯಾಗಿದ್ದರಿಂದ 1 ಲಕ್ಷಕ್ಕೂ ಅಧಿಕ ಮತಗಳ ಗೆಲುವು ಕಾಂಗ್ರೆಸ್‌ನದ್ದಾಗಲಿದೆ. ಸಚಿವ ಶಿವಾನಂದ ಪಾಟೀಲರು ಜಿಲ್ಲೆಗೆ ಹೊಸಬರಲ್ಲ. ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಇದೀಗ ಸಂಯುಕ್ತ ಕೂಡ ಅನುಭವಿ ರಾಜಕಾರಣಿಯಾಗಿದ್ದು, ಮೃಧು ಸ್ವಭಾವದ ಮಹಿಳೆ ಆಗಿದ್ದಾರೆ ಎಂದರು.

ಕುಡಚಿ-ಬಾಗಲಕೋಟೆ ರೈಲು ಮಾರ್ಗ ಜಿಲ್ಲೆಗೆ ಕಂಟಕವಾಗಿದೆ. ವರ್ಷಕ್ಕೆ ಕೇವಲ 10 ಕಿಮೀನಷ್ಟಾದರೂ ಕಾಮಗಾರಿ ನಡೆಸಿದಲ್ಲಿ ಮುಕ್ತಾಯಗೊಳ್ಳುತ್ತಿತ್ತು. ನಾಲ್ಕು ಬಾರಿ ಸಂಸದರಾಗಿ ಯಾವುದೇ ಕಾರ್ಯ ನಡೆಸದೆ ಜಿಲ್ಲೆಯ ಹಿನ್ನಡೆಗೆ ಕಾರಣರಾಗಿದ್ದಾರೆ ಎಂದು ಸಂಸದ ಗದ್ದಿಗೌಡರ ವಿರುದ್ಧ ತಿಮ್ಮಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅಭ್ಯರ್ಥಿಗಳ ಬದಲಾವಣೆಗೆ ಬೇಸರವಿದೆ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಿಮ್ಮಾಪುರ, ಕಳೆದ 5 ಲೋಕಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಬದಲಾವಣೆಯಿಂದ ನನಗೂ ಬೇಸರವಿದೆ. ಈ ಬಾರಿ ಯೋಗ್ಯ ವ್ಯಕ್ತಿಗೆ ಟಿಕೆಟ್ ಒದಗಿಸಿದ್ದರಿಂದ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net