ಗೋಳಿಮಕ್ಕಿ-ಹಾರ್ಸಿಕಟ್ಟಾ ರಸ್ತೆಯಲ್ಲಿವೆ ಡೆಂಜರ್ ಕ್ರಾಸ್

Dangerous curves in road
Published on

ಸಿದ್ದಾಪುರ: ತಾಲೂಕಿನ ಗೋಳಿಮಕ್ಕಿ-ಹಾರ್ಸಿಕಟ್ಟಾ ರಸ್ತೆಯಲ್ಲಿರುವ ಡೆಂಜರ್ ಕ್ರಾಸ್‌ಗಳಿಂದಾಗಿ ವಾಹನ ಚಾಲನೆ ಸವಾಲಿನಿಂದ ಕೂಡಿದೆ.

ಹಾರ್ಸಿಕಟ್ಟಾದಿಂದ ಗೋಳಿಮಕ್ಕಿವರೆಗಿನ ಅಂತರ 8 ಕಿ.ಮೀ.ನಲ್ಲಿ ಬರೋಬ್ಬರಿ 87 ತಿರುವುಗಳಿದೆ. 25ಕ್ಕೂ ಹೆಚ್ಚು ತಿರುವು ಅಪಾಯಕಾರಿಯಾಗಿವೆ. ಕೋಲಸಿರ್ಸಿ-ಹಾರ್ಸಿಕಟ್ಟಾ ಮಾರ್ಗವಾಗಿ ಹೇರೂರು ಹಾಗೂ ಹೆಗ್ಗರಣಿ ಭಾಗಕ್ಕೆ ತೆರಳಬೇಕಾದರೆ ಹಾರ್ಸಿಕಟ್ಟಾ- ಗೋಳಿಮಕ್ಕಿ ರಸ್ತೆಯಲ್ಲಿ ತೆರಳಬೇಕು.

ಆದರೆ, ಇದರ ನಡುವೆ ಅಪಾಯದ ತಿರುವಿರುವಲ್ಲಿ ನಾಮಫಲಕ ಇದ್ದೂ ಇಲ್ಲದಂತಾಗಿದೆ. ಪ್ರತಿವರ್ಷ ಹತ್ತಾರು ಅಪಘಾತಗಳು ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ.
ಉಂಚಳ್ಳಿ ಜಲಪಾತ, ನಿಲ್ಕುಂದ ಸಮೀಪದ ಭೀಮನವಾರೆ ಗುಡ್ಡ, ನೆಲೆಮಾಂವು ಮಠ ಸೇರಿದಂತೆ ವಿವಿಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ನೀಡುವ ರಾಜ್ಯ ಹೆದ್ದಾರಿ ಇದಾಗಿದೆ.

ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆ ಉತ್ತಮವಾಗಿದೆ. ಇಲ್ಲಿಯ ತಿರುವುಗಳು ವಾಹನ ಸವಾರರಿಗೆ ಸವಾಲಿನದ್ದಾಗಿದೆ. ಕೆಲವು ತಿರುವು ಅಪಾಯಕ್ಕೆ ಎಡೆ ಮಾಡಿಕೊಡುವಂತಿದ್ದು, ಅಲ್ಲಿ ಅಗಲೀಕರಣಗೊಳಿಸುವುದಲ್ಲದೆ ರಸ್ತೆ ಹಾಳಾಗದಂತೆ ನೀರು ಸರಿಯಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಮಾಡಬೇಕು.ನಾಗರಾಜ ನಾಯ್ಕ, ವಾಹನ ಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net