ಸರ್ಕಾರಿ ಶಾಲೆ ಕಮಾನು ಡೇಂಜರ್

NANDAGUDI-18-1
Published on

 ವಿಜಯವಾಣಿ ಸುದ್ದಿಜಾಲ ನಂದಗುಡಿ

ಹೊಸಕೋಟೆ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯದ್ವ್ವಾರದ ಕಮಾನು ನೆಲಕಚ್ಚುವಂತೆ ಸಂಪೂರ್ಣ ಭಾಗಿದ್ದು ಯಾವ ಕ್ಷಣದಲ್ಲಾದರೂ ಉರುಳಿಬೀಳಬಹುದು ಎಂಬ ಆತಂಕ ಎದುರಾಗಿದೆ.

ಸರ್ಕಾರಿ ಶಾಲೆಯ ತಡೆಗೋಡೆಗೆ ಹೊಂದಿಕೊಂಡಂತೆ ಕಬ್ಬಿಣದ ಕಮಾನು ನಿರ್ಮಾಣ ಮಾಡಲಾಗಿದೆ. ಮಳೆಯಿಂದಾಗಿ ತಡೆಗೋಡೆಯ ಅರ್ಧಭಾಗ ಕುಸಿದು ಬಿದ್ದಿದ್ದು, ಇದಕ್ಕೆ ಹೊಂದಿಕೊಂಡಂತಿರುವ ಕಮಾನು ಸಹ ಸಂಪೂರ್ಣ ಭಾಗಿದೆ. ಪ್ರತಿನಿತ್ಯ ಶಾಲೆಗಳಿಗೆ ಹೋಗಿಬರುವ ಮಕ್ಕಳು ಇದರ ಮೂಲಕವೇ ಸಾಗಬೇಕಿದ್ದು ಯಾವ ಕ್ಷಣದಲ್ಲಾದರೂ ಕಬ್ಬಿಣದ ಕಮಾನು ನೆಲಕ್ಕುರುಳಿ ಮಕ್ಕಳ ಪ್ರಾಣಕ್ಕೆ ಸಂಚಾಕಾರ ತರಬಹುದು ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ರಜೆ ಇದ್ದ ಕಾರಣ ಅನಾಹುತ ತಪ್ಪಿದೆ: ಗಣತಿ ಹಿನ್ನೆಲೆಯಲ್ಲಿ ದಸರಾ ರಜೆ ವಿಸ್ತರಿಸಿದ್ದರಿಂದ ಶಾಲೆಗೆ ರಜೆ ೋಷಣೆಯಾಗಿದೆ, ಆದ್ದರಿಂದ ಮಕ್ಕಳು ಇತ್ತ ಕಡೆ ಸುಳಿದಿಲ್ಲ. ಒಂದು ವೇಳೆ ಶಾಲೆ ನಡೆಯುತ್ತಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇತ್ತು ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ. ಅಲ್ಲದೆ ಇಲ್ಲಿನ ಮೈದಾನದಲ್ಲಿ ಆಟವಾಡಲು ಸಾಕಷ್ಟು ಮಕ್ಕಳು ಬಂದು ಹೋಗುತ್ತಾರೆ ಆದ್ದರಿಂದ ಕೂಡಲೇ ಕಮಾನು ದುರಸ್ತಿಗೊಳಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಳೆ ಆವಾಂತರ:

ತಾವರೆಕೆರೆ ಭಾಗದಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ಜಮೀನುಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.

ತುಂಬಾ ವರ್ಷದ ಹಿಂದೆ ಸರ್ಕಾರಿ ಶಾಲೆಯ ಪ್ರವೇಶದ್ವಾರದಲ್ಲಿ ಕಬ್ಬಿಣ ಕಮಾನು ಅಳವಡಿಸಲಾಗಿದೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಶಾಲೆಯ ತಡೆಗೋಡೆ ಕುಸಿದಿದ್ದು ಇದಕ್ಕೆ ಹೊಂದಿಕೊಂಡಂತಿರುವ ಕಮಾನು ಸಹ ನೆಲಕಚ್ಚುವ ಹಂತಕ್ಕೆ ನೆಲಕ್ಕೆ ಭಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಮಾನು ದುರಸ್ತಿಗೊಳಿಸುವ ಮೂಲಕ ಎದುರಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ.

ರಾಮಚಂದ್ರಪ್ಪ, ತಾವರೆಕೆರೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net