

ರಾಯಚೂರು ರಾಹುಗ್ರಸ್ತ ರಕ್ತ ಚಂದ್ರಗ್ರಹಣ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತರ‍್ಥರು ತುಂಗಭದ್ರಾ ನದಿಯಲ್ಲಿ ಪವಿತ್ರ ದಂಡೋದಕ ಸ್ನಾನವನ್ನು ಮಾಡಿದರು.
ನಂತರ ದೇಶದ ಹಾಗೂ ಭಕ್ತರ ಯೋಗಕ್ಷೇಮಕ್ಕಾಗಿ ಶ್ರೀಮಠದ ಪ್ರಾರಂಗಣದಲ್ಲಿ ನವಗ್ರಹ ಶಾಂತಿ ಹೋಮವನ್ನು ನಡೆಸಲಾಯಿತು. ಗ್ರಹಣದ ಸಮಯದಲ್ಲಿ ಭಕ್ತರು ಮತ್ತು ಮಠದ ಶಿಷ್ಯರು ರಾಯರ ್ಯ ರ‍್ಶನ ಪಡೆದರು ಮತ್ತು ಪ್ರದಕ್ಷಿಣೆ, ಶ್ಲೋಕ ಪಠಣ ಮತ್ತು ಭಜನೆಗಳನ್ನು ಹಾಡುವ ಮೂಲಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ಸಂರ‍್ಭದಲ್ಲಿ ಶ್ರೀಮಠದ ಮ್ಯಾನೇಜರ್ ಎಸ್.ಕೆ.ಶ್ರೀನಿವಾಸರಾವ್,ಐಪಿ ನರಸಿಂಹ ಮರ‍್ತಿ ಸೇರಿ ಅನೇಕರು ಇದ್ದರು.