

ಹುಬ್ಬಳ್ಳಿ: ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ಹಾಗೂ ಭಾವಸಾರ ಮಹಿಳಾ ಮಂಡಳದ ವಿವಿಧ ಘಟಕ ವತಿಯಿಂದ ಇಲ್ಲಿಯ ವಿದ್ಯಾನಗರದ ತಿಮ್ಮಸಾಗರ ಗುಡಿ ಹಿಂಭಾಗದ ಭಾವಸಾರ ಹಾಸ್ಟೆಲ್ನಲ್ಲಿ ಬುಧವಾರ ದಸರಾ ಹಬ್ಬದ ನಿಮಿತ್ತ ಶ್ರೀಮಾತಾ ಹಿಂಗುಲಾಂಬಿಕಾ ದೇವಿಯ ಪೂಜಾ ಕಾರ್ಯಕ್ರಮ ಜರುಗಿತು.
ನಂತರ ನಡೆದ ದಾಂಡಿಯಾ ರಾಸ್ ಜನಮನ ಸೆಳೆಯಿತು. ಬಣ್ಣ ಬಣ್ಣದ ಹೂವು, ಅರಿಶಿನ-ಕುಂಕುಮ ಬಟ್ಟಲುಗಳ ಜೊತೆಗೆ ದೀಪಗಳನ್ನು ಬಳಸಿ, ಆರತಿ ತಟ್ಟೆಯ ಅಲಂಕಾರದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ದೆಯ ತೀರ್ಪಗಾರರಾಗಿ ಅನ್ನಪೂರ್ಣ ಭಾಂಡಗೆ ಆಗಮಿಸಿದ್ದರು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷ ರಮೇಶ ಧಾರಜಕರ್, ಕಾರ್ಯದರ್ಶಿ ಅನಂತ ಸುಲಾಖೆ, ಸಂಸ್ಥೆಯ ಸಂಸ್ಥಾಪಕ ನಾರಾಯಣ ರಾವ್ ತಾತುಸ್ಕರ್, ಮಹಿಳಾ ಕಲ್ಯಾಣ ನಿರ್ದೇಶಕಿ ಲೀಲಾತಾಯಿ ಸುತ್ರಾವೆ, ಜಯಶ್ರೀತಾಯಿ ತಾತುಸ್ಕರ್, ಸುಮಾ ಮಿರಜಕರ್, ನಂದಾ ಮಹೀಂದ್ರಕರ್, ಸ್ನೇಹಾ ಬೇಧರೆ, ಭಾವಸಾರ ಮಹಿಳಾ ಮಂಡಳದ ವಿವಿಧ ಘಟಕದ ಅಧ್ಯಕ್ಷರಾದ ಸಾರಿಕಾ ಚುಟ್ಕೆ, ಯೋಗಿತಾ, ಪುಷ್ಪ ಮುಧೋಳೆ, ಆಶಾ ನವಲೆ ಇತರರು ಇದ್ದರು.