ಹುಬ್ಬಳ್ಳಿಯಲ್ಲಿ ದಾಂಡಿಯಾ ರಾಜ್

Published on

ಹುಬ್ಬಳ್ಳಿ: ಇಲ್ಲಿಯ ಕಮರಿಪೇಟ ದಸರಾ ಉತ್ಸವ ಕಮಿಟಿ ಹಾಗೂ ಅಂಬಿಕಾ ಜುವೆಲರ್ಸ್ ವತಿಯಿಂದ ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ದಾಂಡಿಯಾ ರಾಜ್ ಕಾರ್ಯಕ್ರಮವನ್ನು ಸೆ. 27 ಹಾಗೂ 28ರಂದು ಎರಡು ದಿನಗಳವರೆಗೆ ಏರ್ಪಡಿಸಲಾಗಿದೆ.

ನಗರದ ಮೂರುಸಾವಿರ ಮಠದ ಮೈದಾನದಲ್ಲಿ ಸಂಜೆ 5ರ ನಂತರ ದಾಂಡಿಯಾ ನಡೆಯಲಿದೆ. ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ದಾಂಡಿಯಾ ಕಾರ್ಯಕ್ರಮದ ಉಚಿತ ಟಿಕೆಟ್ ಕೂಪನ್ ಗಳನ್ನು ಗುರುವಾರ ಕಮರಿಪೇಟ ಜಯ ಭಾರತ್ ಸರ್ಕಲ್ ನಲ್ಲಿ ಬಿಡುಗಡೆ ಮಾಡಲಾಯಿತು.

ವಿಠ್ಠಲಸಾ ಲದ್ವಾ, ನಾಗೇಶ ಕಲ್ಬುಗಿರ್, ಮೋಹನಸಾ ಬದ್ದಿ, ಹನುಮಂತ ನಿರಂಜನ, ವೀರು ಕಠಾರೆ, ಸುಭಾಸ್ ಭಾಂಡಗೆ, ಪ್ರಕಾಶ ಬುರಬುರೆ, ವಿಜಯ ಕಲ್ಬುರ್ಗಿ, ಶಂಕರ ಹಬೀಬ, ಆನಂದ ಹಬೀಬ, ಗಣು ಜರತಾರಘರ ಹಾಗೂ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು, ವಿಜಯ ಮಿಸ್ಕಿನ, ಗಣೇಶ ಲದ್ವಾ, ವಿಜಯ ಪವಾರ, ಸಿದ್ಧಾರ್ಥ ಲದ್ವಾ, ಸಚಿನ್ ಮಿಸ್ಕಿನ್, ನಾಗರಾಜ ಮಿಸ್ಕಿನ್ ಮತ್ತು ಸಮಾಜದ ಗುರುಹಿರಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net