

ಕಾರವಾರ: ನಂದನಗದ್ದಾದ ಸಂತೋಷಿಮಾತಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ 25 ನೇ ವರ್ಷದ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ದಿನ ಸಾಯಂಕಾಲ 5 ಗಂಟೆಯಿಂದ ಕುಂಭ ನೃತ್ಯ, ಗರ್ಭಾ, ದಾಂಡಿಯಾ ಕಾರ್ಯಕ್ರಮಗಳು ನಡೆಯುತ್ತಿವೆ. ದೇವಸ್ಥಾನದ ಅರ್ಚಕರು ಹಾಗೂ ಭಕ್ತರು ತಲೆಯ ಮೇಲೆ ಕುಂಭವನ್ನು ಹೊತ್ತು ನೃತ್ಯ ಮಾಡುವ ವಿಶಿಷ್ಟ ಸಂಪ್ರದಾಯ ಇಲ್ಲಿ ರೂಢಿಯಲ್ಲಿದೆ. ಇದಾದ ಬಳಿಕ ಗರ್ಭಾ ಹಾಗೂ ದಾಂಡಿಯಾ ನೃತ್ಯವನ್ನು 9 ದಿನವೂ ಕೈಗೊಳ್ಳಲಾಗುತ್ತದೆ.
ತಾಲೂಕಿನ ಇತರ ಹಲವೆಡೆಯೂ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿದ್ದು, ರಾತ್ರಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 20 ಕ್ಕೂ ಹೆಚ್ಚು ಕಡೆ ರಾತ್ರಿ 10 ಗಂಟೆಯಿಂದ ಹಾಡಿಗೆ ನೃತ್ಯ ಮಾಡುವ ಸಂಪ್ರದಾಯವಿದೆ.