ಖಾಸಗಿ ಶಾಲೆ ವ್ಯಾಮೋದದಿಂದ ಹೊರಬನ್ನಿ

book distributaion
Published on

ವಿಜಯವಾಣಿ ಸುದ್ದಿಜಾಲವಿಜಯಪುರ
ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದು, ಡೊನೇಷನ್ ಸಂಕಷ್ಟಕ್ಕೆ ಸಿಲುಕದೆ ಗುಣಮಟ್ಟ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಕೊರಮಂಗಲ ಗ್ರಾಪಂ ಸದಸ್ಯ ದೇವರಾಜ್ ಮನವಿ ಮಾಡಿದರು.
ಹೋಬಳಿಯ ದಂಡಿಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಂಡಿಗಾನಹಳ್ಳಿ ಸರ್ಕಾರಿ ಶಾಲೆಯ ಪ್ರತಿ ಮಗುವಿಗೆ 4 ಪುಸ್ತಕದಂತೆ 62 ಮಕ್ಕಳಿಗೆ ನೋಟ್‌ಬುಕ್ ಹಾಗೂ ಅಂಗನವಾಡಿ ಮಕ್ಕಳಿಗೆ ಪೆನ್ನು, ಬಳಪ ಇನ್ನಿತರ ಕಲಿಕಾ ಸಾಮಗ್ರಿ ವಿತರಿಸಲಾಗಿದೆ ಎಂದರು.
ನಮ್ಮ ಗ್ರಾಮ ನಮ್ಮ ಹೆಮ್ಮೆ, ನಮ್ಮ ಮಕ್ಕಳು ನಮಗೆ ಸ್ಫೂರ್ತಿ. ಹಾಗಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಪಕ್ಷ ಭೇದ ಮರೆತು ಮಕ್ಕಳ ವ್ಯಾಸಂಗಕ್ಕೆ ಅಗತ್ಯ ಸೌಲಭ್ಯ ದೊರಕಿಸಿಕೊಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ನಾವೇ ಹೊಣೆಗಾರರು. ಸರ್ಕಾರಿ ಶಾಲೆ ಪ್ರಗತಿ ನಮ್ಮೆಲ್ಲರ ಜವಾಬ್ದಾರಿ, ಉಳಿಸಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಗ್ರಾಮಸ್ಥರಾದ ಗಂಗಾಧರ್, ನಂದೀಶ್, ಮುನಿಬೈರಪ್ಪ, ಚಿಕ್ಕಜಂಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net