ಸಿಟ್ಟಿನ ಭರದಲ್ಲಿ ಮಗನನ್ನೇ ನಾಲೆಗೆ ಎಸೆದ ತಾಯಿ

5-dnd- vonod
Published on


ದಾಂಡೇಲಿ: ಸಿಟ್ಟಿನ ಭರದಲ್ಲಿ ತಾಯಿಯೇ ಮಗನನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ಘಟನೆ ನಗರದ ಹಾಲಮಡ್ಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸಾವಿತ್ರಿ ಸೀಳಿನಿ ಎಂಬ ಮಹಿಳೆ ತನ್ನ 6 ವರ್ಷ ಮಗ ವಿನೋದನನ್ನು ಮನೆಯ ಸಮೀಪದ ಕೊಳಚೆ ನೀರಿನ ನಾಲೆಗೆ ಎಸೆದಿದ್ದರು.ಬಾಲಕನಿಗೆ ಮೂರ್ಚೆ ರೋಗ ಇತ್ತು ಎನ್ನಲಾಗಿದೆ. ಪತಿ ರವಿಕುಮಾರ ಸೀಳಿನಿ ಹಾಗೂ ಸಾವಿತ್ರಿ ನಡುವೆ ಶನಿವಾರ ಸಂಜೆ ಜಗಳವಾಗಿತ್ತು. ಅದೇ ಸಿಟ್ಟಿನಲ್ಲಿ ಮಗನನ್ನು ದೂಡಿದ್ದಳು. ಆದರೆ, ಕೆಲ ಹೊತ್ತಿನಲ್ಲೇ ಆಕೆಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಮಗುವನ್ನು ಎಸೆದಿದ್ದಾಗಿ ಮನೆಯವರಿಗೆ ತಿಳಿಸಿದ್ದಾಳೆ. ಆದರೆ, ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿತ್ತು. ಸ್ಥಳೀಯರು ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಭಾನುವಾರ ಬೆಳಗ್ಗೆ ಅಗ್ನಿಶಾಮಕ, ಪೊಲೀಸ್ ಅಕಾರಿಗಳು ಕಾರ್ಯಾಚರಣೆ ನಡೆಸಿದರು. ಬಾಲಕನ ಶವ ಮೊಸಳೆ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಯಿ ತಾನೇ ಮಾಡಿದ ಕುಕೃತ್ಯಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸವಿತಾ ಅವರನ್ನು ಬಂಸಿದ್ದಾರೆ.
ಮಗುವಿನ ಶೋಧ ಕಾರ್ಯದಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ಪಿಎಸ್‌ಐ ಕೃಷ್ಣಾ ಅರಕೇರಿ, ಜಗದೀಶ ನಾಯ್ಕ, ಪೊಲೀಸ್ ಸಿಬ್ಬಂದಿ ಚಿನ್ಮಯಿ ಪತ್ತಾರ, ದಯಾನಂದ, ಮಂಜುನಾಥ, ಅಬ್ದುಲ್ ಪಟೇಲ್, ರವಿ ಚೌಹಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net