

ದಾಂಡೇಲಿ: ದಾಂಡೇಲಿಯ ಸರ್ಕಾರಿ ಉಪಕರಣಗಾರ ತರಬೇತಿ ಕೇಂದ್ರ (ಜಿಟಿಟಿಸಿ) ಕೇಂದ್ರದಲ್ಲಿ ಹೊಸದಾಗಿ ಡಿಪ್ಲೊಮಾ ಇನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಆರಂಭವಾಗಿದೆ ಎಂದು ಪ್ರಾಂಶಪಾಲ ದತ್ತಾತ್ರಯಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೂ 20 ಸ್ಥಾನಗಳು ಖಾಲಿ ಇವೆ. ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಹಾಸ್ಟೇಲ್ ಹಾಗೂ ವಿದ್ಯಾರ್ಥಿಗಳ ವೇತನ ಸೌಲಭ್ಯ ನೀಡಲಾಗುವುದು ಎಂದರು.
ಸಂಸ್ಥೆಯ ಸಿಬ್ಬಂದಿ ಕೊರತೆ ಬಗ್ಗೆ ಉನ್ನತ ಅಧಿಕಾರಿಗಳಿಗೆ ಬೇಡಿಕೆ ಮಂಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಯು.ಎಸ್. ಪಾಟೀಲ, ಹಿರಿಯ ಉಪನ್ಯಾಸಕ ಧರ್ಮೆಂದ್ರ, ಕಾಲೇಜಿನ ಅಧಿಕ್ಷಕ ವಾಮನ್ ಮಿರಾಶಿ ಇದ್ದರು.