ನಕಲಿ ನೋಟುಗಳ ರೂವಾರಿ ಅರ್ಷದ್ ಬಂಧನ

18-DND ARSHAD ARREST
Published on

ದಾಂಡೇಲಿ: ಇಲ್ಲಿನ ಗಾಂಧಿನಗರದ ಮನೆಯಲ್ಲಿ ನಕಲಿ ನೋಟುಗಳು ಮತ್ತು ನೋಟು ಎಣಿಸುವ ಯಂತ್ರವನ್ನು ಗಾಂಧಿನಗರದ ಬಾಡಿಗೆ ಮನೆಯಲ್ಲಿ ಇಟ್ಟುಕೊಂಡಿದ್ದ ಬಾಂಬೊಲಿಮ್ ಮೂಲದ ಅರ್ಷದ್ ಅಂಜುಮ್ ಖಾನ್ (36) ಎಂಬಾತನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಉತ್ತರ ಪ್ರದೇಶದ ಲಖನೌದಲ್ಲಿ ಬಂಧಿಸಿ ದಾಂಡೇಲಿ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿದ್ದಾರೆ.

ಸಾರ್ವಜನಿಕರಿಗೆ ಮೋಸ ಮಾಡಿ ಅಪರಾಧ ಕೃತ್ಯಗಳನ್ನು ಎಸಗಿ ಮುಂದೆಯೂ ಅಪರಾಧ ಚಟುವಟಿಕೆ ಮಾಡುವ ಉದ್ದೇಶದಿಂದ 500 ರೂಪಾಯಿ ನೋಟುಗಳು, ನೋಟು ಎಣಿಸುವ ಯಂತ್ರ, ನೋಟುಗಳನ್ನು ಪ್ಯಾಕ್ ಮಾಡುವ ಯಂತ್ರಗಳನ್ನು ದಾಂಡೇಲಿ ಗಾಂಧಿನಗರದ ಚರ್ಚ್ ಹತ್ತಿರದ ದೂರುದಾರರಾದ ತಾಜುದ್ದೀನ್ ಖಾಸಿಂಸಾಬ್ ಜುಂಜವಾಡಕರ ಅವರಿಂದ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಆ ಬಾಡಿಗೆ ಮನೆಯಲ್ಲಿ ಅರ್ಷದ್ ದಾಸ್ತಾನು ಇಟ್ಟಿದ್ದ. ತಾಜುದ್ದೀನ್ ಅವರ ದೂರಿನ ಮೇರೆಗೆ ದಾಂಡೇಲಿ ನಗರ ಠಾಣೆ ಪಿಎಸ್​ಐ ಅಮೀನ್ ಅತ್ತಾರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net