ಭಜನಾ ಕುಣಿತ ನಮ್ಮ ಸಂಸ್ಕೃತಿಯ ಪ್ರತೀಕ

UDP-29-11-Bhajana
ಹಿರಿಯಡ್ಕದಲ್ಲಿ ಆಯೋಜಿಸಿದ್ದ ಕುಣಿತ ಭಜನಾ ಉಚಿತ ತರಬೇತಿ ಶಿಬಿರವನ್ನು ರಂಗನಾಥ ಭಟ್​ ಉದ್ಘಾಟಿಸಿದರು. ವಿಜಯ ಶೆಟ್ಟಿ ಕೊಂಡಾಡಿ, ರಾಜೇಂದ್ರಕುಮಾರ್​ ಬಸ್ರೂರು, ರಾಮ ಎಂ., ಶ್ರೀನಿವಾಸ ರಾವ್​ ಹಿರಿಯಡ್ಕ, ರಾಘವೇಂದ್ರ ಮುದ್ರಾಡಿ, ಸತ್ಯಾನಂದ ನಾಯಕ್​ ಆತ್ರಾಡಿ, ಶಿವಕುಮಾರ್​ ಅಂಬಲಪಾಡಿ, ಪೂರ್ಣಿಮಾ ಪೆರ್ಡೂರು ಇತರರಿದ್ದರು
Published on

ಅರ್ಚಕ ರಂಗನಾಥ ಭಟ್​ ಅಭಿಪ್ರಾಯ | ಉಚಿತ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಭಕ್ತಿ ಮಾರ್ಗದ ಜತೆಗೆ ದೈಹಿಕ ಹಾಗೂ ಆರೋಗ್ಯ ವೃದ್ಧಿಕ್ಕೂ ಪೂರಕವಾಗಿರುವ ಕುಣಿತ ಭಜನಾ ನಮ್ಮ ಸಂಸ್ಕೃತಿಯ ಪ್ರತೀಕವೇ ಆಗಿದೆ. ಈ ವಿಶಿಷ್ಟ ರೂಪಕದ ಅಭ್ಯಾಸ ಅತ್ಯಂತ ಮಹತ್ವಪೂರ್ಣವೂ ಆಗಿದೆ ಎಂದು ಹಿರಿಯಡ್ಕದ ಮಹತೋಭಾರ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್​ ಅಭಿಪ್ರಾಯಪಟ್ಟರು.

ಹಿರಿಯಡ್ಕ ದೇವಳದ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕು ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ (ರಿ.) ಉಡುಪಿ ತಾಲೂಕು ಹಾಗೂ ಎಸ್​ವಿಟಿ ಕರಸೇವಕರು ಹಿರಿಯಡ್ಕ ಸಹಯೋಗದಲ್ಲಿ ನೋಂದಾಯಿತ ಶಿಬಿರಾರ್ಥಿಗಳಿಗೆ ಜು.28ರಿಂದ ಆ.25ರ ವರೆಗೆ ಪ್ರತಿ ರವಿವಾರ ನಡೆಯುವ 5 ದಿನಗಳ ಕುಣಿತ ಭಜನಾ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

UDP-29-11A-Bhajana

ಸತ್ಕಾರ್ಯ, ಪ್ರಶಂಸನೀಯ

ಭಜನಾ ಪರಿಷತ್​ನ ಉಪಾಧ್ಯಕ್ಷ ರಾಜೇಂದ್ರಕುಮಾರ್​ ಬಸ್ರೂರು ಮಾತನಾಡಿ, ಹಿರಿಯಡ್ಕದಲ್ಲಿ ಪ್ರಥಮ ಬಾರಿಗೆ 300ಕ್ಕೂ ಹೆಚ್ಚು ಭಜನಾಸಕ್ತರನ್ನು ಒಗ್ಗೂಡಿಸಿ, ಮಾದರಿಯಾಗಿ ಕುಣಿತದ ಭಾಜನಾ ತರಬೇತಿ ಹಮ್ಮಿಕೊಂಡಿರುವುದು ಸತ್ಕಾರ್ಯ ಹಾಗೂ ಪ್ರಶಂಸನೀಯ ಎಂದರು.

ಎಲ್ಲ ತಂಡಗಳಿಗೂ ಪ್ರಮಾಣ ಪತ್ರ

ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ, ಜಿಲ್ಲೆಯಲ್ಲೇ ಇದು ಪ್ರಥಮ ಬಾರಿಗೆ ನಡೆದ ಕಾರ್ಯಕ್ರಮವಾಗಿದೆ. ಸಮಾರೋಪ ಸಮಾರಂಭದಲ್ಲಿ ಎಲ್ಲ ತಂಡಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಗಳ ಪ್ರಮುಖರಾದ ರಾಮ ಎಂ., ಶ್ರೀನಿವಾಸ ರಾವ್​ ಹಿರಿಯಡ್ಕ, ರಾಘವೇಂದ್ರ ಮುದ್ರಾಡಿ, ಸತ್ಯಾನಂದ ನಾಯಕ್​ ಆತ್ರಾಡಿ, ಶಿವಕುಮಾರ್​ ಅಂಬಲಪಾಡಿ, ಪೂರ್ಣಿಮಾ ಪೆರ್ಡೂರು, ಬಾಲಕೃಷ್ಣ ಶೆಟ್ಟಿ ಪೇತ್ರಿ, ನಟರಾಜ್​ ಹೆಗ್ಡೆ, ಸಂತೋಷ್​, ಗಣೇಶ್​ ನಾಯಕ್​, ನಳಿನಾದೇವಿ ಎಂ.ಆರ್​., ತರಬೇತುದಾರರಾದ ಪ್ರಕಾಶ್​ ಮಂದಾರ್ತಿ, ನಿತ್ಯಾನಂದ್​ ಕಬ್ಯಾಡಿ, ರೋಹಿತ್​ ಕಬ್ಯಾಡಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಭಜನಾಸಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net