ನಾಳೆಯಿಂದ ನೃತ್ಯ, ತಾಳವಾದ್ಯ ಪರೀಕ್ಷೆ

20 smg 5
Published on

ಶಿವಮೊಗ್ಗ: ಕರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳು ನ.21ರಿಂದ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಒಟ್ಟು 657 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕರೊನಾ ನಿರ್ವಹಣೆಯ ಮಾನದಂಡ ಅನುಸರಿಸಿದಂತೆ ಈ ಪರೀಕ್ಷೆಯಲ್ಲೂ ಕಟ್ಟೆಚ್ಚರ ವಹಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ.

ನ.21ರ ಬೆಳಗ್ಗೆ 10.30 ರಿಂದ ಸೀನಿಯರ್ ಹಾಗೂ ವಿದ್ವತ್​ಗೆ ಸಂಬಂಧಿಸಿದ ಲಿಖಿತ ಪರೀಕ್ಷೆಗಳು, 22ರ ಬೆಳಗ್ಗೆ 10.30ರಿಂದ ಜೂನಿಯರ್ ಲಿಖಿತ ಪರೀಕ್ಷೆಗಳು ನಡೆಯಲಿವೆ. ನ.23ರ ಬೆಳಗ್ಗೆ 10.30ರಿಂದ ಕರ್ನಾಟಕ ಹಿಂದೂಸ್ತಾನಿ ಸಂಗೀತ, ಭರತನಾಟ್ಯ ಜ್ಯೂನಿಯರ್ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಏರ್ಪಡಿಸಲಾಗಿದೆ. ಡಿ.1ರಿಂದ ಸೀನಿಯರ್ ಹಾಗೂ ವಿದ್ವತ್ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ.

ಮೊಬೈಲ್ ತರುವಂತಿಲ್ಲ: ಪರೀಕ್ಷಾ ಕೇಂದ್ರದೊಳಕ್ಕೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ಪರೀಕ್ಷಾರ್ಥಿಗಳು ಕುಡಿಯುವ ನೀರು ಹಾಗೂ ಸ್ಯಾನಿಟೈಸರ್ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಇನ್ನುಳಿದಂತೆ ಪಕ್ಕವಾದ್ಯ, ಸಹ ಕಲಾವಿದರಿಗೆ ಅನುಮತಿ ಇರುತ್ತದೆ ಎಂದು ಪರೀಕ್ಷಾ ಮುಖ್ಯ ಅಧೀಕ್ಷಕ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಎಲ್ಲಿಲ್ಲಿ ಪರೀಕ್ಷಾ ಕೇಂದ್ರ

ಶಿವಮೊಗ್ಗ-ಬಿಎಚ್ ರಸ್ತೆ ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲೆ ವಿಭಾಗ

ಸಾಗರ-ಶಿವಲಿಂಗಪ್ಪ ಪ್ರೌಢಶಾಲೆ

ಭದ್ರಾವತಿ-ನ್ಯೂಟೌನ್ ಸರ್ಕಾರಿ ಬಾಲಿಕಾ ಪಪೂ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net