ಗಮನ ಸೆಳೆದ ಮಹಾರಾಜ ಕಾಲೇಜು ವಿದ್ಯಾರ್ಥಿಗಳ ನೃತ್ಯ

34
Published on

ಮೈಸೂರು: ಯುವ ಸಂಭ್ರಮದಲ್ಲಿ ಮಂಗಳವಾರ ನಗರದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮ ನೃತ್ಯ ರೂಪಕದ ಯುವಕರಿಗೆ ನಮ್ಮ ಇತಿಹಾಸ ತಿಳಿಸಿದರು.


‘ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು, ಹಾಡುವೆ ಕೇಳಿ ನಾ ಹಾಡುವೆ ಕೇಳಿ’ ಹಾಡಿಗೆ ನೃತ್ಯ ಪ್ರದರ್ಶಿಸುವ ಮೂಲಕ ಶ್ರೀಕೃಷ್ಣದೇವರಾಯರ ಆಡಳಿತದಲ್ಲಿನ ವಿಜಯನಗರ ಸಾಮ್ರಾಜ್ಯದ ವೈಭವನ್ನು ತೋರಿಸಿದರು.

ಅಷ್ಟೆ ಅಲ್ಲ ಹೊಸ್ಸಳ ಸಾಮ್ರಾಜ್ಯ ಹುಟ್ಟಿದ್ದ ಬಗ್ಗೆ, ಹೊಸ್ಸಳನ ಬಗ್ಗೆಯೂ ಹೇಳಿದರು. ವೀರಮದಕರಿ ನಾಯಕರ ಶೌರ್ಯದ ಬಗ್ಗೆ, ಒನಕೆ ಓಬವ್ವನ ಧೈರ್ಯದ ಬಗ್ಗೆಯೂ ತಿಳಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net