ಮನಸೆಳೆದ ನೃತ್ಯ-ಸಂಗೀತ ಸಮಾಗಮ

h19- Sunidhi 1
Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ವತಿಯಿಂದ ಭಾನುವಾರ ಕೇಶ್ವಾಪುರದ ಉದಯನಗರ ಲಕ್ಷ್ಮೀನಾರಾಯಣ ಸಭಾಗೃಹದಲ್ಲಿ ಆಯೋಜಿಸಿದ್ದ ‘ಕಲಾ ಸಂಭ್ರಮ’ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಸಮಾಗಮ ಪ್ರೇಕ್ಷಕರ ಗಮನ ಸೆಳೆಯಿತು.

ಚೇತನಾ ಘಂಟಿ ಸುಗಮ ಸಂಗೀತ, ಗದಿಗಯ್ಯ ಹಿರೇಮಠ ಹಾಗೂ ಎಸ್.ಪಿ. ಭಾಷಾಖಾನ್ ಅವರಿಂದ ಜಾನಪದ ಗೀತೆ ಗಾಯನ, ಪ್ರಿಯಾಂಕಾ ಜೋಶಿ ಹಾಗೂ ಸಿದ್ಧಾರೂಢ ನೇಗಿನಹಾಳ ಅವರಿಂದ ಭರತನಾಟ್ಯ, ಅಜೀತ ಬಸಾಪುರ ಅವರಿಂದ ಮಿಮಿಕ್ರಿ, ಛಬ್ಬಿ ಗ್ರಾಮದ ಕಲಾ ತಂಡದ ಶಿವಪ್ಪ ಲಮಾಣಿ, ರಮೇಶ ಮೋತೆನವರ, ಶರಣಪ್ಪ ಬಿಂದಳಗಿ ಅವರಿಂದ ಹಂತಿಪದ, ಸೋಬಾನ ಪದ, ಸಮೂಹ ನೃತ್ಯಗಳು ನಡೆದವು.

ಅಕ್ಷತಾ ಜನಕಟ್ಟಿ, ಪ್ರಶಾಂತ ಕೊಪ್ಪಿಕರ, ಕಲ್ಲಪ್ಪ ಕುರಿ ಗಾಯನ ಪ್ರಸ್ತುತ ಪಡಿಸಿದರು. ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಲೆ ಕಾರ್ಯಕ್ರಮ ನಿರ್ವಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಸುನಿಧಿ ಕಲಾ ಸೌರಭ ಅಧ್ಯಕ್ಷ ಸುಭಾಸ ನರೇಂದ್ರ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಕಲಾವಿದರು ಕಲಾ ಪ್ರದರ್ಶನದಿಂದ ದೂರಾಗಿದ್ದರು. ಕಲಾವಿದರನ್ನು ಸಂಗಮಗೊಳಿಸಲು, ಕಲೆಗೆ ಮರುಜೀವ ನೀಡುವ ಸದುದ್ದೇಶದಿಂದ ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಅನುಸರಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಉದ್ಯಮಿ ಸಂತೋಷ ಆರ್. ಶೆಟ್ಟಿ, ಲಕ್ಷ್ಮಣರಾವ್ ಓಕ್ ಅತಿಥಿಯಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net