ಮೈಸೂರಿನಲ್ಲಿ ಮೇ 16 ರಂದು ‘ಶಾಂತಿ ಮತ್ತು ಪ್ರೀತಿಗಾಗಿ’ ನೃತ್ಯ ಕಾರ್ಯಕ್ರಮ

Dance
Published on

ಮೈಸೂರು: ಕಲಾಸುರುಚಿ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಸಹಚಾರಿ ತಂಡವು ಕುವೆಂಪುನಗರದ ರಂಗಮನೆಯಲ್ಲಿ ಮೇ 16 ರಂದು ಸಂಜೆ 6.30ಕ್ಕೆ ‘ಶಾಂತಿ ಮತ್ತು ಪ್ರೀತಿಗಾಗಿ’ ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

ಸಹಚಾರಿಯ ಮೊದಲ ಪ್ರಯೋಗವು ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಎಂಬುದಾಗಿದ್ದು, ‘ಸಂವಿಧಾನ ಸಾಥಿ’ ಎಂಬ ಯೋಜನೆಯ ಭಾಗವಾಗಿದೆ. ‘ಸಂವಿಧಾನ ಸಾಥಿ’ ಎಂಬುದು ಬೆಂಗಳೂರಿನ ಸಂವಾದ-ಬದುಕು ನೀಡುವ ಫೆಲೋ ಶಿಪ್ ಆಗಿದ್ದು , ಇದು ಭಾರತದ ಸಂವಿಧಾನದ ತತ್ವಗಳನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ.

ಪ್ರಸ್ತುತ ನೃತ್ಯ ಪ್ರದರ್ಶನವು ನಮ್ಮ ಸಂವಿಧಾನದಲ್ಲಿ ತಿಳಿಸಿರುವ ಧರ್ಮನಿರಪೇಕ್ಷತೆ ಮತ್ತು ಬಂಧುತ್ವ ಎಂಬ ಆದರ್ಶಗಳನ್ನು ಪ್ರತಿಪಾ ದಿಸುತ್ತದೆ. ಕಲಾವಿದರಾದ ಆಶಿತಾ ರಾಜೇಶ್ ಕುಮಾರ್, ಭಾವನಾ ಬಟ್ಟಾರ, ಚಂದನಾ ಎಸ್. ನಾಗ್, ಸಂತೋಷಿ ರಾಜ ಗೋಪಾಲನ್, ಕೆ. ಶಾರದ ಆಚಾರ್ಯ, ವಿದಿಶ ರವೀಂದ್ರ ನಾಥ್ ನೃತ ಪ್ರದರ್ಶಿಸಲಿದ್ದಾರೆ.

ಇವರಿಗೆ ಸಂಗೀತ ಸಾಂಗತ್ಯದಲ್ಲಿ ಶ್ಲಾಘ್ಯ ಎಸ್. ವಸಿಷ್ಠ (ಹಾಡುಗಾರಿಕೆ), ಕರ್ಣ ಬಿ ಆತ್ರೇಯ (ಮೃದಂಗ), ಕಾರ್ತಿಕ್ ವೈಧಾತ್ರಿ (ರಿದಂ ಪ್ಯಾಡ್), ಎ.ಎನ್.ರಘು ಸಿಂಹ(ಕೊಳಲು) ಹಾಗೂ ಕೆ. ಶಾರದ ಆಚಾರ್ಯ (ನಟುವಾಂಗ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net