ಡಾ.ಅಗ್ನಿಕಾ ಅಜಯ್‌ಕುಮಾರ್‌ರಿಂದ ನೃತ್ಯ ಸಮರ್ಪಣೆ

Published on

ಮೈಸೂರು: ನಿಮಿಷಾಂಬಾ ನೃತ್ಯ ಶಾಲೆಯ ವಿದ್ಯಾರ್ಥಿನಿ ಹಾಗೂ ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ಡಾ.ಅಗ್ನಿಕಾ ಅಜಯ್‌ಕುಮಾರ್ ಅವರಿಂದ ಜು.20, 27 ಮತ್ತು ಆ.4ರಂದು ನಗರ ಸೇರಿದಂತೆ ವಿವಿಧೆಡೆ ನೃತ್ಯ ಸಮರ್ಪಣೆ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀನಿಮಿಷಾಂಬಾ ನೃತ್ಯ ಶಾಲೆಯ ಸಂಸ್ಥಾಪಕ ಶ್ರೀಧರ್ ಜೈನ್ ತಿಳಿಸಿದರು.
ಡಾ.ಅಗ್ನಿಕಾ ಅಜಯ್‌ಕುಮಾರ್ ಅವರು ಈ ವೇಳೆ ಅರ್ಧ ನಾರೀಶ್ವರ ಎಂಬ ಪರಿಕಲ್ಪನೆಯ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜು.20ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ, 27ರಂದು ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರ, ಆ.4ರಂದು ಸಂಜೆ 5.30ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವೇಳೆಯೂ ಬಿಡುವು ಮಾಡಿಕೊಂಡು ಪ್ರತಿ ಶನಿವಾರ ಹಾಗೂ ಭಾನುವಾರ ಭರತನಾಟ್ಯ ಕಲಿಯುವ ಶ್ರದ್ಧೆಯನ್ನು ಇವರು ತೋರಿದರು ಎಂದು ಶ್ಲಾಘಿಸಿದರು.
ಡಾ.ಅಗ್ನಿಕಾ ಅಜಯ್‌ಕುಮಾರ್, ಪಾಲಕರಾದ ಭಾಗ್ಯಾ ಅಜಯ್‌ಕುಮಾರ್ ಹಾಗೂ ಡಾ.ಬಿ.ಎಸ್. ಅಜಯ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net