ನೃತ್ಯ ಸಂಭ್ರಮ 9ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಏ. 9ರಂದು ಸಂಜೆ 5.30ಕ್ಕೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್​ ಸಾಂಸ್ಕೃತಿಕ ಭವನದಲ್ಲಿ "ನೃತ್ಯ ಸಂಭ್ರಮ' ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ಸಮಾರಂಭವನ್ನು ರತಿಕಾ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಾಗರತ್ನ ನಾಗರಾಜ ಹಡಗಲಿ ಉದ್ಘಾಟಿಸುವರು. ಡಾ. ರಾಜನ್​ ದೇಶಪಾಂಡೆ, ವಿದುಷಿ ಪ್ರಮೋದಾ ಉಪಾಧ್ಯಾಯ, ಕುಮಾರ್​ ಬೆಕ್ಕೇರಿ ಅತಿಥಿಗಳಾಗಿ ಆಗಮಿಸುವರು. ಡಾ. ವಿನಾಯಕ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿಯ ವಿದುಷಿ ಶೃತಿ ನಾಯಕ ಹಾಗೂ ವಿದುಷಿ ಅಪರ್ಣ ದೀಕ್ಷಿತ ಶಿಷ್ಯ ವೃಂದದವರು ಭರತ ನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಇದರ ಜತೆಗೆ ವಿವಿಧ ಕಲಾವಿದರು ಭರತನಾಟ್ಯದ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಜಿ. ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ಸಂಚಾಲಕ ಸಮೀರ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net