ಮೇ 17ರಂದು ಕುಣಿತ ಭಜನಾ ಪ್ರದರ್ಶನ

rayan_241121_Bajane1
Published on



ಮಂಗಳೂರು : ಶ್ರೀ ಮಂಗಳಾದೇವಿ ದೇವಸ್ಥಾನ ಬೋಳಾರ ಇದರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮತ್ತು ಶ್ರೀರಾಮ ಸನಾತನ ಭಜಕರ ಒಕ್ಕೂಟದ ವತಿಯಿಂದ ಮೇ 17ರಂದು ಸಾಯಂಕಾಲ 4ರಿಂದ ಕುಣಿತ ಭಜನಾ ಪ್ರದರ್ಶನ
ನಡೆಯಲಿದೆ. ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಅರುಣ್‌ಕುಮಾರ್ ಐತಾಳ್ ಅವರ ಉಪಸ್ಥಿತಿಯಲ್ಲಿ ಪ್ರದರ್ಶನದ ಉದ್ಘಾಟನೆ ನೆರವೇರಲಿದೆ. ಹೊಸಬೆಟ್ಟು ಕುಳಾಯಿಯ ಬಾಲವಿಕಾಸ ಭಜನಾ ಮಂಡಳಿ, ಕುಂದಾಪುರ ತ್ರಾಸಿಯ ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನದ ಭಜನಾ ತಂಡ ಮತ್ತು ಉಡುಪಿ ಬೀಜಾಡಿಯ ಶ್ರೀ ರಾಮ ಭಜನಾ ಮಂದಿರದ ತಂಡದವರು ಕುಣಿತ ಭಜನಾ ಪ್ರದರ್ಶನ ನೀಡಲಿದ್ದಾರೆ. ರಾತ್ರಿ 7.30ಕ್ಕೆ ನಡೆಯುವ ಕುಣಿತ ಭಜನಾ ಸಾಮೂಹಿಕ ಮಂಗಲೋತ್ಸವದಲ್ಲಿ ನಗರದ ಹಿರಿಯ ಭಜನಾ ತಂಡಗಳ
ಗುರಿಕಾರರು ಭಾಗವಹಿಸಲಿದ್ದಾರೆ ಎಂದು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಂಸ್ಥಾಪಕ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net