

ಹಂಸಭಾವಿ: ಸ್ಥಳೀಯ ಶಿವಯೋಗೀಶ್ವರ ಆಶ್ರಮದಲ್ಲಿ ಡಿ. 18 ರಿಂದ 22 ರವರೆಗೆ ಶ್ರೀಮದ್ ಅಥಣಿ ಶ್ರೀ ಮುರುಘೕಂದ್ರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆಯ 19ನೇ ವಾರ್ಷಿಕೋತ್ಸವ, ಗುಡ್ಡಾಪುರದ ಶರಣೆ ದಾನಮ್ಮದೇವಿಯ 9ನೇ ಜಾತ್ರಾ ಮಹೋತ್ಸವ, ಶಾಂಭವಿ ತಾಯಿಯವರ 2ನೇ ವರ್ಷದ ಪುಣ್ಯಾರಾಧನೆ ಹಾಗೂ ಇಟಗಿ ಭೀಮಾಂಬಿಕಾ ದೇವಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ. 18ರಿಂದ ಪ್ರತಿದಿನ ಬೆಳಗ್ಗೆ ಅಥಣಿ ಮುರುಘೕಂದ್ರ ಶಿವಯೋಗಿಗಳ ಹಾಗೂ ಶರಣೆ ದಾನಮ್ಮದೇವಿಗೆ ರುದ್ರಾಭಿಷೇಕ ನಡೆಯಲಿದೆ. ಸಂಜೆ 7ಗಂಟೆಗೆ ಇಟಗಿ ಭೀಮಾಂಬಿಕಾ ದೇವಿ ಪುರಾಣ ಪ್ರವಚನ ಪ್ರಾರಂಭವಾಗಲಿದೆ.
ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮತ್ತು ಗುತ್ತಲ ಕಲ್ಮಠ ಮತ್ತು ಅಗಡಿಯ ಪ್ರಭುಸ್ವಾಮಿಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಪ್ರವಚನ ನಡೆಸಿಕೊಡುವರು. ದಾನೇಶ್ವರಿ ಭಜನಾ ಸಂಘದವರು ಪ್ರಾರ್ಥಿಸುವರು. ಮಂಗಳಗೌರಮ್ಮ ಮೊಗಲಿಶೆಟ್ಟರ್ ಮತ್ತು ಸ್ಪೂರ್ತಿ ಚಪ್ಪರದಹಳ್ಳಿಮಠ ಸಂಗೀತ ಸೇವೆ ನೀಡುವರು. ಎ.ಎನ್. ಹೆಡಿಯಾಲ ತಬಲಾ ಸಾಥ್ ನೀಡುವರು.