

ಅಥಣಿ: ಪಟ್ಟಣದಲ್ಲಿ ಶ್ರೀ ದಾನಮ್ಮದೇವಿಯ ಜಾತ್ರಾಮಹೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಸುಮಂಗಲೆಯರ ಪೂರ್ಣ ಕುಂಭಮೇಳ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಶ್ರೀ ದಾನಮ್ಮದೇವಿಯ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ಮಹಾಪ್ರಸಾದ ನೆರವೇರಿತು. ಮಹಾಂತೇಶ ವಸದ, ಮಹಾಂತೇಶ ಅವಟಿಮಠ, ರುದ್ರಪ್ಪ ಕರ್ಣಿ, ಸಂಗಪ್ಪ ಊಣ್ಣಿ, ಉದಯ ಕಾರವೇಕಾರ, ಈರಣ್ಣ ಅಡಗಲ್ಲ ಇತರರಿದ್ದರು.