

ವಿಜಯಪುರ: ಜತ್ತ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದ ದಾನಮ್ಮದೇವಿ ಜಾತ್ರೆಯು ನ. 29 ರಿಂದ ಡಿ. 2 ರವರೆಗೆ ಸಂಭ್ರದಿಂದ ನಡೆಯಲಿದೆ.
ನ. 29 ರಂದು ಬೆಳಗ್ಗೆ 10ಕ್ಕೆ ಜಾತ್ರೆ ಹಿನ್ನೆಲೆ ದಾಸೋಹ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಗುಡ್ಡಾಪುರ ಹಿರೇಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹಾಗೂ ಗೌಡಗಾಂವ ಸಂಸ್ಥಾನ ಹಿರೇಮಠದ ಡಾ. ಜಯಸಿದ್ಧೇಶ್ವರ ಶಿವಾರ್ಚಾರ ಸ್ವಾಮೀಜಿ ನೆರವೇರಿಸುವರು. ನ. 30 ಕಾರ್ತಿಕ ಅಮಾವಾಸ್ಯೆಯ ನಿಮಿತ್ತ ಸಂಜೆ 8 ಸಾಮೂಹಿಕ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಂತರ ದೇವಿಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಜರಗಲಿದ್ದು, ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮತ್ತು ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೆರವೇರಿಸುವರು.
ಡಿ. 1 ರಂದು ಸಂಜೆ 5ಕ್ಕೆ ದೇವಿಯ ರಥೋತ್ಸವ ಕಾರ್ಯಕ್ರಮವು ನಡೆಯಲಿದ್ದು, ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹಾಗೂ ಬುರಣಾಪುರ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ ನೆರವೇರಿಸುವರು. ಸೋಲಾಪುರದ ಶಾಸಕ ವಿಜಯಕುಮಾರ ದೇಶಮುಖ ಹಾಗೂ ಜತ್ತ ಶಾಸಕ ಗೋಪಿಚಂದ ಪಡಳಕರ ಉಪಸ್ಥಿತಿ ವಹಿಸುವರು. ನಂತರ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಂಜೆ 8ಕ್ಕೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಜಾತ್ರಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.