

ಬೈಲಹೊಂಗಲ: ಪಟ್ಟಣದ ಚನ್ನಮ್ಮ ಉಪನಗರದ ದಾನಮ್ಮದೇವಿ ದೇವಸ್ಥಾನದ 16ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಜೆ ಮಹಾರಥೋತ್ಸವವು ಸಾವಿರಾರು ಸದ್ಭಕ್ತರ ನಡುವೆ ಸಡಗರ ಸಂಭ್ರಮದಿಂದ ನೆರವೇರಿತು.
ತೆಂಗು, ಬಾಳೆ, ಕಬ್ಬು ಹಾಗೂ ತಳಿರು- ತೋರಣಗಳಿಂದ ರಥವನ್ನು ಸಿಂಗರಿಸಲಾಗಿತ್ತು. ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಅರ್ಚಕ ವೀರೇಶ ಶಾಸ್ತ್ರಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಭಕ್ತರು ದಾನಮ್ಮದೇವಿ ಹಾಗೂ ಸೋಮೇಶ್ವರರಿಗೆ ಜಯಘೋಷ ಮೊಳಗಿಸಿದರು. ರಥಕ್ಕೆ ಖಾರಿಕ್, ಬಾಳೆಹಣ್ಣು ಅರ್ಪಿಸಿ ಕತಾರ್ಥರಾದರು.