ದಾಂಪತ್ಯ ಸಿರಿ ಕೃತಿ ಬಿಡುಗಡೆ

28 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದಾಂಪತ್ಯ ಎನ್ನುವ ಅಗ್ನಿ ದಿವ್ಯವು ದಾಂಪತ್ಯ ಸಿರಿಯಾಗಿ ಸಮಾಜಕ್ಕೆ ಒಳಿತನ್ನು ತರಬೇಕು ಎಂಬುದು ಒಂದು ಆರೋಗ್ಯಕರ ಆದರ್ಶ ಎಂದು ಸಾಹಿತಿ ಡಾ. ಶಾಂತಾ ಇಮ್ರಾಪುರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೇಘರಾಜ ಪ್ರಕಾಶನದಿಂದ ಹೊರ ತಂದಿರುವ, ಮೇಘಾ ಹುಕ್ಕೇರಿ ಅವರ ದಾಂಪತ್ಯ ಸಿರಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲ್ಲೋ ಹುಟ್ಟಿ ಬೆಳೆದ ಒಂದು ಗಂಡು ಇನ್ನೆಲ್ಲೋ ಹುಟ್ಟಿ ಬೆಳೆದ, ವಿಭಿನ್ನ ಸಂಸ್ಕಾರದ ಹೆಣ್ಣನ್ನು ಮದುವೆಯಾಗಿ ಸಂಸಾರ ನಡೆಸುವಾಗ ಎದುರಾಗುವ ಅಡೆತಡೆಗಳನ್ನು ದಾಟಿ ಬದುಕು ಕಟ್ಟುವುದು ಮತ್ತು ಸಮಾಜಕ್ಕೆ ತಮ್ಮ ಕಾಳಜಿ ನೀಡುವುದು ಸುಲಭದ ಮಾತಲ್ಲ ಎಂದರು.
ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಶಿವ ಪುರಾಣದಿಂದ ಕನ್ನಡ ಸಾಹಿತ್ಯದ ತ್ರಿಪದಿ ವಚನ ಇತ್ಯಾದಿ ಎಲ್ಲ ಮಗ್ಗಲುಗಳಲ್ಲಿ ದಾಂಪತ್ಯದ ವಿಚಾರವನ್ನು ನಾವು ಹೇಗೆ ದಾಖಲಿಸಿದ್ದೇವೆ ಎಂದು ಈ ಪುಸ್ತಕವು ವಿವೇಚಿಸುತ್ತದೆ ಎಂದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಲೀಲಾವತಿ ಬೆಲ್ಲದ ದಂಪತಿ ಕೃತಿ ಬಿಡುಗಡೆಗೊಳಿಸಿದರು. ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಲಲಿತಾ ಕೆರಿಮನಿ, ಈಶ್ವರ ಮೆಡ್ಲೇರಿ, ಮಹಾಂತೇಶ ನರೇಗಲ್​, ರಂಜಾನ ದರ್ಗಾ ದಂಪತಿ, ಭಾರತಿದೇವಿ ರಾಜಗುರು, ವಿ.ಸಿ.ಸವಡಿ, ಶಂಕರ ಕುಂಬಿ, ಎಸ್​. ವಿ.ಅಯ್ಯನಗೌಡರ, ಡಾ. ಶರಣಮ್ಮ ಗೋರೆಬಾಳ, ಇತರರು ಇದ್ದರು.
ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು. ಲೇಖಕಿ ಮೇಘಾ ಹುಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಕುಲಕರ್ಣಿ ನಿರೂಪಿಸಿದರು. ಸೋಮಶೇಖರ ಕೆರಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net