ಡಿ. 9 ರಂದು ದಂಬೆಲ್ ಪ್ರೆಂಡ್ಸ್ ವಾರ್ಷಿಕೋತ್ಸವ

mng-8 Dec Dambel friends
Published on

ಮಂಗಳೂರು : ದಂಬೆಲ್ ಫ್ರೆಂಡ್ಸ್ ಶೇಡಿಗುರಿ ಇದರ 33ನೇ ವಾರ್ಷಿಕೋತ್ಸವ ಡಿ.9 ರಂದು ಸಾಯಂಕಾಲ ‌7 ಕ್ಕೆ ದಂಬೆಲ್ ನದಿ ಕಿನಾರೆಯಲ್ಲಿ ನಡೆಯಲಿದೆ.

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಇನಾಯತ್ ಆಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಪೋರೇಟರ್ ಕಿರಣ್ ಕುಮಾರ್, ಉದ್ಯಮಿ‌ಗಳಾದ ಬಾಬಾ ಅಲಂಕಾರ್ ಉರ್ವ, ಸದಾಶಿವ ಶೆಟ್ಟಿ ಉರ್ವ, ಸಾಯಿ ಶಕ್ತಿ ಕಲಾ ಬಳಗದ ಸಂಚಾಲಕಿ ಲಾವಣ್ಯ ವಿಶ್ವಾಸ್ ದಾಸ್, ಮಾಜಿ ಕಾರ್ಪೋರೇಟರ್ ಪದ್ಮನಾಭ ಬಿ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ಉರ್ವ ಇವರನ್ನು ಸನ್ಮಾನಿಸಲಾಗುವುದು. ರಾತ್ರಿ 9 ಕ್ಕೆ ಸಾಯಿ ಶಕ್ತಿ ಕಲಾ ಬಳಗದವರಿಂದ ಬೊಳ್ಳಿ ಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದಂಬೆಲ್ ಪ್ರೆಂಡ್ಸ್ ನ ಅಧ್ಯಕ್ಷ ರವಿರಾಜ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net