

ಡಂಬಳ: ಮುಂಡರಗಿ ತಾಲೂಕಿನ ಬಹುದೊಡ್ಡ ಗ್ರಾಮ ಎಂಬ ಖ್ಯಾತಿ ಪಡೆದ ಡಂಬಳದ ಬಸ್ ನಿಲ್ದಾಣ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಡಂಬಳ ಗ್ರಾಮವು 18 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು. ಜಿಲ್ಲೆಯ ಹೋಬಳಿ ಕೇಂದ್ರಗಳಾದ ಲಕ್ಕುಂಡಿ, ಶಿಗ್ಲಿ, ಹುಲಕೋಟಿ, ಹೊಳೆಆಲೂರ, ಮುಳಗುಂದ, ಬೆಳ್ಳಟ್ಟಿ, ಕಣ್ಣೂರು, ನರೇಗಲ್ಲ ಬಸ್ ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗಿದೆ. ಡಂಬಳ ಬಸ್ ನಿಲ್ದಾಣ ಮೂನಾಲ್ಕು ದಶಕಗಳ ಕಳೆದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಹಲವಾರು ಬಾರಿ ಮೇಲ್ದರ್ಜೆಗೆ ಏರಿಸುವಂತೆ ಸಾರಿಗೆ ಸಚಿವರಿಗೆ, ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರು ಸ್ವಂದಿಸುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ನಿಲ್ದಾಣದಲ್ಲಿ ಮುಖ್ಯವಾಗಿ ಸ್ವಚ್ಚತೆ ಮರೀಚಿಯಾಗಿದ್ದು ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಹಾವಳಿ ವಿಪರೀತವಾಗಿವೆ. ಮಧ್ಯ ವ್ಯಸನಿಗಳು ರಾತ್ರಿ ಕುಡಿದು ಪ್ಯಾಕೆಟ್ ಗಳು ಅಲ್ಲಯೇ ಬಿಸಾಡುವುದರಿಂದ ಕುಡುಕರ ಅಡ್ಡೆಯಂತಾಗಿದೆ.
ಶೌಚಗೃಹಗಳು ದುಸ್ಥಿತಿ : ಇನ್ನೂ ನಿಲ್ದಾಣದ ಒಳಗಿರುವ ಶೌಚಗೃಹಗಳ ಸ್ಥಿತಿ ನೋಡಿದರೆ ವಾಕರಿಕೆ ಬರುವಂತಿದೆ. ಅವುಗಳ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಅದರ , ಸುತ್ತಲೂ ತ್ಯಾಜ್ಯ ಎಸೆಯುವುದರಿಂದ ವಾತಾವರಣ ಮತ್ತಷ್ಟು ಹದಗೆಟ್ಟಿದೆ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣವಿದ್ರೂ ನಿಲ್ಲಣದ ಬಸ್ :
ಈ ಮೊದಲು ಬಸ್ ನಿಲ್ದಾಣ ಕಂಟ್ರೋಲ್ ಇದ್ದರು, ಆಗ ಅಷ್ಟಾಗಿ ಸಮಸ್ಯೆಗಳು ಕಾಣುತ್ತಿರಲ್ಲಿಲ್ಲ. ಆದರೆ, ಸಧ್ಯ ಕಂಟ್ರೋಲ್ ಇಲ್ಲದ ಕಾರಣ ಗದಗ- ಮುಂಡರಗಿ ಬಸ್ ಗಳು ಬಸ್ ನಿಲ್ದಾಣದ ಒಳಗೆ ಬಾರದೇ ನೇರವಾಗಿ ರಾಜ್ಯ ಹೆದ್ದಾರಿ ಹಿಡಿದು ಮುಂದೆ ಸಾಗುತ್ತಿವೆ. ಬಸ್ ನಿಲ್ದಾಣದ ಒಳಗಡೆ ಕಾಯುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ, ಬಸ್ ನಾನ್ ಸ್ಟಾಪ್ ನೆಪಯೊಡ್ಡಿ ಕೆಲ ಬಸ್ ಗಳು ಖಾಲಿ ಇದ್ದರೂ ಕಂದಾಪುರ, ಹೊಸಡಂಬಳ, ಡಂಬಳ, ಮೇವುಂಡಿ, ಬರದೂರ ನಿಲ್ಲಿಸದೇ ಹೋಗುತ್ತಿದ್ದಾರೆ. ಇದರಿಂದ ಗದಗ, ಮುಂಡರಗಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನಗರ ಪ್ರದೇಶಕ್ಕೆ ಹೋಗುವ ಉದೋಗ್ಯಸ್ಥರಿಗೆ ತೊಂದರೆ ಅನುಭವಿಸುವಂತಾಗಿದೆ.
ಕೋಟ್ : ಡಂಬಳ ಗ್ರಾಮದ ಬಸ್ ನಿಲ್ದಾಣದಲ್ಲಿ ಸಂಪೂರ್ಣ ಅನೈರ್ಮಲ್ಯ ತಾಂಡವಾಡುತ್ತಿದೆ. ನಾನ್ ಸ್ಟಾಪ್ ನೆಪ ಮಾಡಿಕೊಂಡು ಗದಗ- ಮುಂಡರಗಿ ಬಸ್ ಗಳು ಗ್ರಾಮದ ಬಸ್ ನಿಲ್ದಾಣ ಬಾರದ ಹೋಗುತ್ತಿರುವುದರಿಂದ ಪ್ರಯಾಣಿಕರು ಸಮಸ್ಯೆ ಉಂಟಾಗಿದೆ, ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸುವಂತೆ ಹಲವಾರು ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. - ಈರಣ್ಣ ಶೆಟ್ಟರ್, ಸಾಮಾಜಿಕ ಕಾರ್ಯಕರ್ತ ಡಂಬಳ.
ಕೋಟ್. ಬಸ್ ನಿಲ್ದಾಣವನ್ನು ಶೀಘ್ರವೇ ಸ್ಛಚ್ಛಗೊಳಿಸಲಾಗುತ್ತದೆ. ಡಂಬಳ ಬಸ್ ನಿಲ್ದಾಣಕ್ಕೆ ಕಂಟ್ರೋಲರ್ ನನ್ನ ನಿಯೋಜಿಸಲಾಗುತ್ತದೆ, ಡಂಬಳ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಪ್ರಯಾಣಕರಿಗೆ ತೊಂದರೆ ಆಗದಂತೆ ಕ್ರಮಗೊಳ್ಳಲಾಗುತ್ತದೆ. - ಎಮ್ ಎಸ್ ಜಗಳೂರು, ಪ್ರಭಾರಿ ಮುಂಡರಗಿ ಘಟಕದ ವ್ಯವಸ್ಥಾಪಕ.