ದಾಮಸ್ಕಟ್ಟೆ-ಪಟ್ಟೆಕ್ರಾಸ್ ರಸ್ತೆ ವಿಸ್ತರಣೆಗೆ ಶಿಲಾನ್ಯಾಸ

Kin_Shilanyasa
Published on

ಕಿನ್ನಿಗೋಳಿ: ಮೂರುಕಾವೇರಿಯಿಂದ ದಾಮಸ್ಕಟ್ಟೆವರೆಗೆ ರಸ್ತೆ ವಿಸ್ತರಣೆಗೊಂಡಿದ್ದು, ದಾಮಸ್ಕಟ್ಟೆಯಿಂದ ಪಟ್ಟೆ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಈ ಕಾರಣದಿಂದ ಈ ಹಿಂದಿನ ಸರ್ಕಾರವಿದ್ದ ಸಂದರ್ಭ ಈ ರಸ್ತೆಗೆ 10 ಕೋಟಿ ರೂ. ಅನುದಾನವನ್ನು ಬಿಡುಗಡೆ ವಾಡಲಾಗಿದೆ ಎಂದು ಶಾಸಕ ಉವಾನಾಥ ಕೋಟ್ಯಾನ್ ಹೇಳಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಐಕಳ ಪಂಚಾಯಿತಿ ವ್ಯಾಪ್ತಿಯ ದಾಮಸ್ಕಟ್ಟೆಯಿಂದ ಪಟ್ಟೆಕ್ರಾಸ್ ವರೆಗೆ ರಸ್ತೆ ವಿಸ್ತರಣೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಗಣೇಶ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಜಯಲಕ್ಷ್ಮೀ ಪೂಜಾರಿ, ಸದಸ್ಯರಾದ ರಾಜೇಶ್ ಶೆಟ್ಟಿ, ಜಯಂತಿ ಶೆಟ್ಟಿ, ಅನಿತಾ ಡಿಕೊಸ್ತಾ, ರವೀಂದ್ರ ಪೂಜಾರಿ, ಪ್ರಕಾಶ್ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಭಾಸ್ಕರ ಶೆಟ್ಟಿ ಏಳಿಂಜೆ, ಹರೀಶ್ ಶೆಟ್ಟಿ ತಾಮಣಿಗುತ್ತು, ಸುಧೀರ್ ಶೆಟ್ಟಿ ಏಳಿಂಜೆ, ಸ್ವರಾಜ್ ಶೆಟ್ಟಿ ಮುಂಡ್ಕೂರು, ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯ ವಿನೋದ್ ಬೊಳ್ಳೂರು, ವಿಜಯ್ ಅಮೀನ್ ಪಟ್ಟೆ, ಜಯಶ್ರೀ, ಸುರೇಖಾ, ರಮಣಿ, ಗುತ್ತಿಗೆದಾರರಾದ ವಿನೇಶ್ ಕಾರ್ಕಳ, ಪ್ರಬಂಧಕ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net